Saturday, May 15, 2021
No menu items!
Home Bharata ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದ ಮಮತಾ ಬ್ಯಾನರ್ಜಿ ಆಪ್ತ

ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದ ಮಮತಾ ಬ್ಯಾನರ್ಜಿ ಆಪ್ತ

ಕೊಲ್ಕತ್ತಾ: ಇಂದು ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಜಿ ಆಪ್ತ ಸುವೇಂದು ಅಧಿಕಾರಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.

ಸುವೇಂದು ಅಧಿಕಾರಿ ರಾಜೀನಾಮೆ ನೀಡಿದ ಸಮಯದಲ್ಲಿ ಅವರು ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಚರ್ಚೆಗಳು ಹುಟ್ಟಿಕೊಂಡಿದ್ದವು. ಇದೀಗ ಅಧಿಕೃತವಾಗಿ ಬಿಜೆಪಿ ಸೇರುವ ಮೂಲಕ ಸುವೇಂದು ಅಧಿಕಾರಿ ಹಲವು ವರ್ಷಗಳ ಟಿಎಂಸಿ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಇದೇ ವೇಳೆ ಹಲವು ಟಿಎಂಸಿ ಮುಖಂಡರು ಹಾಗೂ MLAಗಳೂ ಸಹ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಇದಕ್ಕೂ ಮುನ್ನ ಟಿಎಂಸಿಯ ಸದಸ್ಯರಿಗೆ ಪತ್ರ ಬರೆದಿರುವ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್ನಲ್ಲಿ ಆಳವಾದ ಕೊಳೆತ ಮತ್ತು ಅಸ್ವಸ್ಥತೆ ಉಂಟಾಗಿದೆ, ಒಂದೇ ದಿನದಲ್ಲಿ ಯಾವುದೇ ವ್ಯಕ್ತಿಯಿಂದ ಟಿಎಂಸಿ ಸ್ಥಾಪನೆಯಾಗಿಲ್ಲ.ಇದು ಬೃಹತ್ ಪ್ರಮಾಣದಲ್ಲಿ ನಿರಂತರ ಪ್ರಯತ್ನವಾಗಿತ್ತು ಎಂದು ಬರೆದಿದ್ದಾರೆ.

ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕೆ ಈಗಿನಿಂದಲೇ ಪ್ರಮುಖ ಪಕ್ಷಗಳು ಪ್ರಚಾರ ಚುರುಕುಗೊಳಿಸಿವೆ. ಆಡಳಿತರೂಢ ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಿ ಅಧಿಕಾರದ ಗದ್ದುಗೆಗೇರಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಹೀಗಿರುವಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ 42 ಲೋಕಸಭಾ ಕ್ಷೇತ್ರಗಳಲ್ಲಿ ಪೈಕಿ ಬಿಜೆಪಿಯು ಪಶ್ಚಿಮ ಬಂಗಾಳದ 18 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಇದು ವಿಧಾನಸಭಾ ಚುನಾವಣೆ ಗೆಲ್ಲುವ ವಿಶ್ವಾಸ ಮೂಡಿಸಿದೆ. ಇದಕ್ಕಾಗಿ ಬಿಜೆಪಿಯ ಘಟಾನುಘಟಿ ನಾಯಕರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಪಕ್ಷ ಸಂಘಟಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments