ನಟ ಸುದೀಪ್ ಹೈದರಾಬಾದ್ನಲ್ಲಿ ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈ ನಡುವೆ ಸುದೀಪ್ ಭಾನುವಾರ ಬ್ರೇಕ್ನಲ್ಲಿ ಕ್ರಿಕೆಟ್ ಆಡಿದ್ದಾರೆ. ಸುದೀಪ್ಗೆ ಕ್ರಿಕೆಟ್ ಎಂದರೆ ತುಂಬಾ ಪ್ರೀತಿ. ಹಾಗಾಗಿ, ಬಿಡುವು ಸಿಕ್ಕಾಗ ಸ್ನೇಹಿತರ ಜೊತೆ ಸೇರಿ ಕ್ರಿಕೆಟ್ ಆಡುತ್ತಿರುತ್ತಾರೆ. ಭಾನುವಾರವೂ ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡಿ, ಅಭಿಮಾನಿಗಳಿಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ.
ಈಗ ನಡೆಯುತ್ತಿರುವ ಘಟನೆಗಳ ಮಧ್ಯೆ ಮುಖದಲ್ಲಿ ನಗು ತರಿಸುವಂಥದ್ದು, ಎನರ್ಜಿ ಕೊಡುವಂಥದ್ದು ನಮಗೆ ಸಿಗೋದೇ ವಿರಳವಾಗಿದೆ. ಹಾಗಾಗಿ, ನಮ್ಮ ಬಳಿ ಏನು ಇದೆಯೋ ಅದರಲ್ಲೇ ಖುಷಿ ಕಾಣಬೇಕು, ಅದರಲ್ಲೇ ಉತ್ತಮವಾದುದನ್ನು ಮಾಡಬೇಕು? ಎನ್ನುತ್ತಾರೆ. ಸತತವಾಗಿ ಎರಡೂವರೆ ತಿಂಗಳಿನಿಂದ ಫ್ಯಾಂಟಮ್ ಚಿತ್ರೀಕರಣ ನಡೆಯುತ್ತಿದ್ದು, ಅಕ್ಟೋಬರ್ 22ರವರೆಗೆ ಮುಂದುವರೆಯಲಿದೆ. ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನವಿದೆ.
ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಬರೀ ನೆಗೆಟಿವ್ ಸುದ್ದಿಗಳೇ ಕೇಳಿಬರುತ್ತಿದೆ. ಸಾವು-ನೋವು, ಬೇಸರ ಈ ತರಹದ ಸುದ್ದಿಗಳೇ ಕೇಳಿಬರುತ್ತಿದೆ. ಇಂತಹ ಸಂದರ್ಭದಲ್ಲಿ ಮುಖದಲ್ಲಿ ನಗು ತಂದುಕೊಂಡು ಖುಷಿಯಾಗಿರೋದು ಕಷ್ಟ. ಹಾಗಾಗಿ, ಸುದೀಪ್ ತಾವು ಶೂಟಿಂಗ್ ಬಿಡುವಿನಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಒಂದಷ್ಟು ಅಂಶಗಳನ್ನು ಕೂಡಾ ಬರೆದುಕೊಂಡಿದ್ದಾರೆ.