ನವದೆಹಲಿ: ಅನ್ನದಾತರ ಕಷ್ಟವನ್ನು ಆಲಿಸದ ಇಂತಹ ಅಹಂಕಾರದ ಸರ್ಕಾರವನ್ನು ನೋಡಿರಲಿಲ್ಲ. ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ರಾಜಧರ್ಮ ಪಾಲಿಸಿ ಎಂದು ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.
ಸರ್ಕಾರದ ನಿರ್ಲಕ್ಷ್ಯದಿಂದ ಕೆಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಹೃದಯಹೀನ ಘಟನೆಗೆ ಮೋದಿ ಸರ್ಕಾರವಾಗಲಿ, ಪ್ರಧಾನಿಯವರಾಗಲಿ ಅಘವಾ ಯಾವುದೇ ಸಚಿವರಾಗಲಿ ಸಂತಾಪ ಸೂಚಿಸುವ ಮಾತುಗಳನ್ನಾಡಿಲ್ಲ. ಮೃತಪಟ್ಟ ಎಲ್ಲಾ ರೈತರಿಗೆ ನಾನು ಗೌರವ ಸೂಚಿಸುತ್ತೇನೆ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.
ಪ್ರಧಾನಿ ಮೋದಿ ಸರ್ಕಾರ ತನ್ನ ಅಧಿಕಾರದ ದರ್ಪ ಬಿಟ್ಟು, ಎಲ್ಲಾ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಬೇಷರತ್ ಹಿಂಪಡೆದು, ಚಳಿ ಹಾಗೂ ಮಳೆಯಲ್ಲಿ ಸಾಯುತ್ತಿರುವ ರೈತರ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಇನ್ನು ಸಮಯವಿದೆ. ಇದು ರಾಜಧರ್ಮವಾಗುತ್ತದೆ. ಸಾವಿಗೀಡಾದ ರೈತರಿಗೆ ನೈಜ ಕೊಡುಗೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತ ಸರ್ಕಾರವೂ ಸ್ವತಂತ್ರ ಪಡೆದ ಬಳಿಕ ಇಂತ ದರ್ಪದ ಸರ್ಕಾರ ಮೊದಲ ಬಾರಿಗೆ ಬಂದಿದೆ. ದೆಹಲಿಯ ಗಡಿಭಾಗದಲ್ಲಿ ತಮ್ಮ ಬೇಡಿಕೆ್ಳನ್ನು ಈಡೇರಿಸಿಕೊಳ್ಳಲು ಹೆಣಗಾಡುತ್ತಿರುವ ಅನ್ನದಾತರ ಸ್ಥೊತೊಯನ್ನು ಕಂಡಯ ದೇಶದ ಇತರೆ ಜನರಂತೆ ನಾನು ಕೂಎ ಯಾತನೆಗೆ ಒಳಗಾಗಿದ್ದೇನೆ. ಕೇಂದ್ರ ಸರ್ಕಾರ ರೈತರನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಕಾರಣ ಇಲ್ಲಿವರೆಗೂ 50ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.