ಮುಂಬೈ : ಇತ್ತೀಚೆಗೆ ಬಾಲಿವುಡ್ ನಟಿ ಕಂಗನಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮಾತಾಡಿ ಸದ್ದು ಮಾಡಿದ್ದ ನಟಿ, ಆ ನಂತರ ಮಹಾರಾಷ್ಟ್ರ ಸಿಎಂ ವಿರುದ್ಧವೂ ಏಕವಚನದಲ್ಲಿ ಮಾತಾಡಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದರು. ಕಂಗನಾ ವಿರುದ್ಧವಾಗಿ ಟ್ರೆಂಡ್ ಆಗಿರುವ ಅಭಿಯಾನ ನೋಡಿದ್ರೆ ಜನ ಎಷ್ಟು ರೋಸಿ ಹೋಗಿದ್ದಾರೆಂದು ಗೊತ್ತಾಗುತ್ತಿದೆ.
ತಮ್ಮ ಟ್ವಿಟ್ಟರ್ ಕೋಮು ದ್ವೇಷ ಹರಡುತ್ತಿದ್ದಾರೆಂಬ ಆರೋಪದ ಮೇಲೆ ನಟಿ ಕಂಗನಾ ಹಾಗೂ ಅವರ ಸಹೋದರಿ ರಂಗೋಲಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಅದರಲ್ಲಿ ಬಾಂದ್ರಾ ಪೊಲೀಸರ ಎದುರು ಅಕ್ಟೋಬರ್ 25 ಮತ್ತು 26 ರಂದು ಹಾಜರಾಗಬೇಕೆಂದು ಸಮನ್ಸ್ ನಲ್ಲಿ ನೀಡಿತ್ತು.
ಪೊಲೀಸರ ಸಮನ್ಸ್ ಕುರಿತು ಕಂಗನಾ ಒಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ನಲ್ಲಿ ʼ ಬಹುಶಃ ಪೊಲೀಸರಿಗೆ ಕಂಗನಾ ನೆನಪು ಹೆಚ್ಚಾಗಿರಬೇಕು. ಅವರು ನನ್ನ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಡೋಂಟ್ ವರಿ, ನಾನು ಬಹಳ ಬೇಗ ಬರುತ್ತೇನೆ. ಎಂದಿದ್ದರು.
ಜೊತೆಗೆ ತನ್ನನ್ನು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಹಾಗೂ ಸಾವರ್ಕರ್ ಗೂ ಹೋಲಿಕೆ ಮಾಡಿಕೊಂಡಿದ್ದರು. ಹೇಗೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಮನೆಯನ್ನು ಒಡೆದರೋ ನನ್ನ ಮನೆಯನ್ನು ಅದೆ ರೀತಿ ಒಡೆದಿದ್ದಾರೆ. ಸಾವರ್ಕರ್ ಅವರನ್ನು ಹೇಗೆ ಜೈಲಿಗೆ ಕಳುಹಿಸಿದ್ದರೋ ಅದೇ ರೀತಿ ನನ್ನನ್ನು ಜೈಲಿಗೆ ಕಳುಹಿಸುತ್ತಾರೆ ಎಂಬ ಮಾತುಗಳನ್ನು ಆಡಿದ್ದರು.
Can we please trend #ChupKarKangana ?!
— Official PeeingHuman (@thepeeinghuman) October 23, 2020
RT if you're sick of her BJP IT cell drafted tweets https://t.co/WqWMZP0lbd
ಈ ರೀತಿಯ ಮಾತುಗಳನ್ನ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಕೋಪಗೊಂಡಂತೆ ಇದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಭಿಯಾನವನ್ನೇ ಶುರು ಮಾಡಿದ್ದಾರೆ. ʻಚುಪ್ ಕರ್ ಕಂಗನಾʼ ಎಂಬ ಅಭಿಯಾನ ಶುರು ಮಾಡಿದ್ದು, ಸಖತ್ ಟ್ರೆಂಡ್ ಆಗಿದೆ.