ಚಿಕ್ಕಮಗಳೂರು : ಹಾವು ಅಂದ್ರೆ ಯಾರಿಗೆ ತಾನೇ ಭಯ ಆಗಲ್ಲ ಹೇಳಿ. ಒಂದು ಕಿಲೋ ಮೀಟರ್ ದೂರದಲ್ಲಿ ಕಂಡರು ಎರಡು ಕಿಲೊ ಮೀಟರ್ ದೂರಕ್ಕೆ ಓಡಿ ಹೋಗಿರುತ್ತೇವೆ. ಇನ್ನು ಕೆಲಸ ಮಾಡುವ ಕಚೇರಿಯಲ್ಲೇ ಹಾವು ಕಂಡರೆ ಇನ್ನೆಷ್ಟು ಗಾಬರಿಯಾಗಬೇಡ ಹೇಳಿ. ಅಂತದ್ದೇ ಘಟನೆ ಜಿಲ್ಲೆಯ ಡಿಸಿ ಕಚೇರಿಯಲ್ಲಿ ನಡೆದಿದೆ.
ಜಿಲ್ಲಾಧಿಕಾರಿಯ ಕಚೇರಿ ಗಾಂಧಿ ಪ್ರತಿಮೆ ಬಳಿ ಕೆರೆ ಹಾವೊಂದು ಅತ್ತಿಂದಿತ್ತ ಇತ್ತಿಂದತ್ತ ಓಡಾಡಿ ಸಿಬ್ಬಂದಿಗಳಿಗೆ ಭಯ ಹುಟ್ಟಿಸಿದೆ. ಮೊದಲೇ ಕೆರೆ ಹಾವಾಗಿದ್ದರಿಂದ ಒಂದು ಕಡೆ ನಿಂತಿಲ್ಲ. ಅತ್ಯಂತ ವೇಗವಾಗಿ ಓಡುವ ಕಾರಣ ಒಮ್ಮೆ ಕಣ್ಮರೆಯಾದ್ರೆ, ಇನ್ನೊಮ್ಮೆ ಇನ್ನೆಲ್ಲೋ ಕಾಣಿಸಿಕೊಂಡಿದೆ. ಇದನ್ನು ಕಂಡು ಕಚೇರಿಯ ಸಿಬ್ಬಂದಿ ಗಾಬರಿಯಾಗಿದ್ದಾರೆ. ಅಷ್ಟೇ ಅಲ್ಲ ಕೆಲಸಕ್ಕಾಗಿ ಬಂದಿದ್ದ ಸಾಮಾನ್ಯ ಜನರು ಕೂಡ ಹೆದರಿ ಓಡಿ ಹೊಗಿದ್ದಾರೆ.
ಕಡೆಗೆ ಈ ಹಾವು ಪೈಪ್ ಒಳಗೆ ಸೇರಿತ್ತು. ಆನಂತರ ಸ್ನೇಕ್ ನರೇಶ್ ಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಅರ್ಧ ಗಂಟೆಗಳ ಕಾಲ ಹಾವನ್ನು ಹುಡುಕಿ ಹಿಡಿದಿದ್ದಾರೆ. ಗಾಬರಿಯಾದ ಸಿಬ್ಬಂದಿಗಳಿಗೆಲ್ಲಾ ಸ್ನೇಕ್ ನರೇಶ್ ಹಾವಿನ ಬಗ್ಗೆ ಹೇಳಿದ್ದಾರೆ. ಇದು ಕೆರೆ ಹಾವಾಗಿರುವ ಕಾರಣ ಏನು ಮಾಡಲ್ಲ. ಅದಕ್ಕೆ ನಮಗಿಂತ ಹೆಚ್ಚು ಭಯ ಇರುತ್ತೆ ಎಂದು ಧೈರ್ಯ ತುಂಬಿದ್ದಾರೆ. ಆಮೇಲೆ ಸಿಬ್ಬಂದಿಯೆಲ್ಲಾ ಹಾವನ್ನು ಕೈನಲ್ಲಿಡಿದು, ಮುಟ್ಟಿದ್ದಾರೆ. ಹಾವು ಏನು ಮಾಡಲ್ಲ ಅಂತ ತಿಳಿದು ಖುಷಿ ಪಟ್ಟಿದ್ದಾರೆ.