ನವದೆಹಲಿ: ನೆಟ್ಟಿಗರ ಪ್ರಶ್ನೆಗೆ ಕೇಂದ್ರ ಸಚಿವೆ ಸ್ಪೃತಿ ಇರಾನಿ ಚಪ್ಪಲಿ ಬ್ರ್ಯಾಂಡ್ ಕೇಳಬೇಡಿ ಎಂದಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಸ್ಪೃತಿ ಇರಾನಿ ಫೋಟೋ ವೊಂದನ್ನು ಹಾಕಿದ್ದು, ಅದಕ್ಕೆ ನೆಟ್ಟಿಗರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದು, ಅದರಲ್ಲಿ ಒಂದು ಪ್ರಶ್ನೆಗೆ ಚಪ್ಪಲಿ ಬ್ರ್ಯಾಂಡ್ ಕೇಳಬೇಡಿ ಎಂದಿದ್ದಾರೆ.
ಗಾರ್ಡನ್ ಏರಿಯಾದಲ್ಲಿ ಟೇಬಲ್ ಮೇಲೆ ಲ್ಯಾಪ್ಟಾಪ್ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಫೋಟೋ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡು ಪ್ಯಾನ್ಡಮಿಕ್ ಮಾರ್ನಿಂಗ್ ಅಂತ ಬರೆದುಕೊಂಡಿದ್ದರು. ಫೋಟೋ ಅಪ್ಲೋಡ್ ಆಗುತ್ತಿದ್ದಂತೆ ನೆಟ್ಟಿಗರು ಸಹ ಲೈಕ್ಸ್, ಕಮೆಂಟ್ ಮಾಡಲಾರಂಭಿಸಿದ್ದರು.
ಒಬ್ಬ ನೆಟ್ಟಿಗ ಇದು ಹವಾಯಿ ಚಪ್ಪಲಿ ಅಲ್ವಾ ಅಂತ ಕಮೆಂಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಸ್ಮೃತಿ ಇರಾನಿ, ಅರೇ ಬ್ರದರ್ ಇದು ಹವಾಯಿ ಚಪ್ಪಲಿ, 200 ರೂಪಾಯಿ ಬೆಲೆಯದ್ದು. ಈಗ ನೀವು ಯಾವ ಬ್ರ್ಯಾಂಡ್ ಎಂದು ಮಾತ್ರ ಕೇಳಬೇಡಿ.. ಲೋಕಲ್ ಇದೆ ಎಂದು ಉತ್ತರ ನೀಡಿದ್ದಾರೆ.
https://www.instagram.com/p/CIiC_GFnAXN/?utm_source=ig_web_copy_link
ಕೇಂದ್ರ ಸಚಿವೆ ಸ್ಪೃತಿ ಇರಾನಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿ ಇರ್ತಾರೆ. ಹಾಗೇ ನೆಟ್ಟಿಗರಿಗೂ ಉತ್ತರ ಕೊಡುತ್ತಾ ಇರುತ್ತಾರೆ. ಫೋಟೋಗೆ ಕಮೆಂಟ್ ಮಾಡಿದವರಿಗೆ ಅಷ್ಟೇ ಹಾಸ್ಯಸ್ಪದವಾಗಿ ಉತ್ತರ ನೀಡಿರುವುದು, ನೆಟ್ಟಿಗರು ಮತ್ತಷ್ಟು ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ.