ನಿದ್ರೆ ಅನ್ನೋದು ಎಲ್ಲರಿಗೂ ಬಹಳ ಮುಖ್ಯ. ಅದರಲ್ಲೂ ಇತ್ತೀಚೆಗೆ ಲೈಫ್ ಸ್ಟೈಲ್, ವರ್ಕ್ ಪ್ರೆಶರ್ ಸೇರಿದಂತೆ ಹಲವು ಒತ್ತಡಗಳಿಂದ ಎಷ್ಟೋ ಸಲ ನಿದ್ದೆ ನಮ್ಮಿಂದ ದೂರ ಆಗಿರುತ್ತೆ. ಒಂದು ಕಡೆ ನಿದ್ದೆಯಿಲ್ಲದ ಒತ್ತಡ ಇನ್ನೊಂದು ಕಡೆ ಕೆಲಸದ ಒತ್ತಡ ಎರಡು ಮಿಕ್ಸ್ ಆಗಿ ಜೀವನದ ಬಗ್ಗೆಯೇ ಜಿಗುಪ್ಸೆ ಬರುವ ಹಂತಕ್ಕೆ ಹೋಗುತ್ತದೆ. ಹೀಗಾಗಿ ನಿದ್ದೆ ಅನ್ನೋದು ತುಂಬಾ ಮುಖ್ಯವಾಗಿರಬೇಕಾಗುತ್ತದೆ. ಹೀಗಾಗಿ ನಾವು ಕೊಡುವ ಟಿಪ್ಸ್ ಫಾಲೋ ಮಾಡಿದ್ರೆ ನಿದ್ರೆ ಬರುತ್ತೆ.
ಮೊದಲು ನೀವೂ ಮಲಗುವ ಕೋಣೆಯ ಬಗ್ಗೆ ಗಮನ ಹರಿಸಬೇಕು. ಅಂದ್ರೆ ನೀವೂ ಮಲಗುವ ಕೊಠಡಿ ತಂಪಾಗಿರಬೇಕು. ಆಗ ನಿದ್ದೆ ಬೇಗ ಬರುತ್ತದೆ. ಈ ಬಗ್ಗೆ ವೈದ್ಯರು ಕೂಡ ಸಲಹೆ ಕೊಟ್ಟಿದ್ದಾರೆ.
ತಂಪಾದ ಕೊಠಡಿಯಲ್ಲಿ ಮಲಗುವುದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಒತ್ತಡವೂ ಕಡಿಮೆಯಾಗುತ್ತದೆ. ತುಂಬಾ ಸೆಖೆಯಿದ್ದರೆ ನಿಮ್ಮ ದೇಹ ಕೂಡ ಬೆವೆತು ಹೋಗುತ್ತಿರುತ್ತದೆ. ಇದರಿಂದ ನಿಮ್ಮ ನಿದ್ದೆಗೆ ಭಂಗವಾಗುತ್ತದೆ.
ನಿದ್ದೆಗೆ ಹೆಚ್ಚು ಭಂಗ ಬರುವುದು ಮಲಗುವ ಕೊಠಡಿಯು ಕಾರಣವಾಗುತ್ತದೆ. ಆ ಕೊಠಡಿಯ ಟೆಂಪರೇಚರ್ ಕಾರಣವಾಗಿರುತ್ತದೆ. ತಂಪಾದ ವಾತಾವರಣವಿದ್ದರೆ ಖಂಡಿತ ಒಳ್ಳೆಯ ನಿದ್ದೆ ಬರುತ್ತದೆ.