Saturday, April 17, 2021
No menu items!
Home Karnataka ಸರಳ ದಸರಾಗೆ ಈ ಬಾರಿ ಖರ್ಚಾಗಿದ್ದು ಕೇವಲ 2.05 ಕೊಟಿ; ಎಸ್ ಟಿ ಸೋಮಶೇಖರ್

ಸರಳ ದಸರಾಗೆ ಈ ಬಾರಿ ಖರ್ಚಾಗಿದ್ದು ಕೇವಲ 2.05 ಕೊಟಿ; ಎಸ್ ಟಿ ಸೋಮಶೇಖರ್

ಮೈಸೂರು: ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ನಾಡಹಬ್ಬ ಅತ್ಯಂತ ಸರಳ ಮತ್ತು ಸುಸೂತ್ರವಾಗಿ ನಡೆಸಲಾಯಿತು. ಇದೀಗ ಸರಳ ದಸರಾದ ಖರ್ಚು ಮತ್ತು ಲೆಕ್ಕಾಚಾರ ಬಗೆಗಿನ ಮಾಹಿತಿಯನ್ನ ಜಿಲ್ಲಾ ಉಸ್ತುವಾರಿ ಮತ್ತು ಸಹಕಾರಿ ಸಚಿವರಾದ ಎಸ್. ಟಿ ಸೋಮಶೇಖರ್ ನೀಡಿದರು.

ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ನಡೆಸುವುದೆಂದು ತೀರ್ಮಾನಿಸಲಾಗಿತ್ತು. ಮತ್ತು ಸರಳ ದಸರಾಗೆ ರಾಜ್ಯ ಸರ್ಕಾರ ₹10 ಕೋಟಿ ಬಿಡುಗಡೆ ಮಾಡಿತ್ತು. ಇದೀಗ ಖರ್ಚು ವೆಚ್ಚದ ವರದಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆಯಾದ 10 ಕೋಟಿಯಲ್ಲಿ ಕೇವಲ 2.05 ಕೋಟಿ ಮಾತ್ರ ಖರ್ಚಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರು ರಾಜವಂಶಸ್ಥರಿಗೆ ಪ್ರತೀ ವರ್ಷದಂತೆ ನೀಡುವ ಗೌರವ ಧನ ₹ 40 ಲಕ್ಷ ನೀಡಲಾಗಿದೆ. ಇನ್ನುಳಿದಂತೆ ಸಾಂಸ್ಕೃತಿಕ ಮತ್ತು ಕಲಾವಿದರ ಸಂಭಾವನೆಗೆ ₹44 ಲಕ್ಷ, ದಸರಾ ಆನೆಗಳ ನಿರ್ವಹಣೆಗಾಗಿ ₹35 ಲಕ್ಷ , ಜಂಬೂ ಸವಾರಿಗಾಗಿ ₹ 16 ಲಕ್ಷ ಖರ್ಚಾಗಿದೆ ಎಂದು ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಬಿಡುಗಡೆಯಾದ ₹ 10 ಕೋಟಿ ಹಣದಲ್ಲಿ ₹ 2,05,83,167 ಹಣ ಖರ್ಚಾಗಿದ್ದು ₹7,08,16,833 ಹಣ ಉಳಿಕೆಯಾಗಿದೆ. ಸದ್ಯ ಈ ಹಣ ಜಿಲ್ಲಾಧಿಕಾರಿಯವರ ಖಾತೆಯಲ್ಲಿ ಇದ್ದು ಮುಂದಿನ ದಿನಗಳಲ್ಲಿ ಇದನ್ನು ಯಾವ ಉದ್ದೇಶಗಳಿಗೆ ಬಳಸಬೇಕೆಂದು ಮಾನ್ಯ ಮುಖ್ಯಮಂತ್ರಿ ಗಳ ಜೊತೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಅರಮನೆ ಮಂಡಳಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಜಿಲ್ಲಾ ಮತ್ತು ಸಹಕಾರಿ ಸಚಿವರು , ಸರಳ ದಸರಾ ಸುಸೂತ್ರವಾಗಿ ನಡೆಯುವಂತೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

PROBLEMAS BASICOS DEL ESPANOL/LOS PRONOMBRES pdf ebook

Auteur: Edelsa ISBN 9788485786954 L’expérience professionnelle est modele cv chauffeur livreur cet exemple de cv chauffeur livreur vous aidera à rédiger un cv chauffeur livreur personnalisé....

Le Fauconnier parfait- Ou Méthode pour dresser et faire voler les oiseaux torrent

Auteur: Arts Et Metiers (Librairie) ISBN 9782854970739 Nous sommes en train d'analyser cette erreur. pour nous aider dans nos recherches, veuillez contacter le service clientèle. Côte-d'or...

Code 93- Grand Format en ligne lire

Auteur: Michel Lafon ISBN 9782749917788 Coste est capitaine de police au groupe crime du SDPJ 93. Depuis quinze ans, il a choisi de travailler en banlieue...

Ebook gratuit 80 TESTS DE LOGIQUE. Pour apprendre à se connaître et à se dépasser – Poche

Auteur: Marabout ISBN 9782501032650 La logique est la faculté de raisonner avec un esprit conséquent et méthodique. Pour maîtriser cette faculté, il faut savoir concevoir, juger...

Recent Comments