ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಮಾತನಾಡುವಾಗ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಅವರಿಗೆ ಖಾರಾವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಜಾಪ್ರಭುತ್ವ ಅನ್ನೋದು ಇದೆಯಾ ಅಂತ ಪ್ರಶ್ನಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಅವರು ಪತ್ರಗಳನ್ನು ಬರೆದಿದ್ದು, ಅದಕ್ಕೆ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ನಾನು ಸಿಎಂ ಅವರಿಗೆ ಪತ್ರ ಬರೆಯುತ್ತಲೇ ಇದ್ದೇನೆ ಆದ್ರೆ ಸಿಎಂ ಮಾತ್ರ ಒಂದಕ್ಕೂ ಉತ್ತರ ಕೊಟ್ಟಿಲ್ಲ. ಏನ್ರಿ ಪ್ರಜಾಪ್ರಭುತ್ವ ಇದೆಯಾ ಕರ್ನಾಟಕದಲ್ಲಿ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕೇಂದ್ರ ಸಚಿವರಿಗೂ ಪತ್ರ ಬರೆದಿದ್ದೆ. ಸಚಿವ ನರೇಂದ್ರ ಸಿಂಗ್ ತೋಮರ್ ನನ್ನ ಪತ್ರಕ್ಕೆ ಉತ್ತರ ಕೊಟ್ಟಿದ್ದಾರೆ. ಅದ್ರೆ ಸಿಎಂ ಉತ್ತರ ಕೊಟ್ಟಿಲ್ಲ. ನೀವ್ಯಾಕೆ ಉತ್ತರ ಕೊಡಲ್ಲ..? ಉತ್ತರ ಕೊಡದೇ ಇರಲು ನಿಮಗೆಲ್ಲಾ ಸ್ಪೆಷಲ್ ಪ್ರಿವಿಲೇಜ್ ಕೊಟ್ಟಿದ್ದಾರಾ..? ಈ ಸರ್ಕಾರ ಜನರಿಗೆ ಉತ್ತರದಾಯಿಯಾಗಿರಬೇಕು ಆದರೆ ಉತ್ತರ ಕೊಡ್ತಿಲ್ಲ. ಇತ್ತ ಅಧಿಕಾರಿಗಳು ಏನು ಮಾಹಿತಿ ನೀಡ್ತೀಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.