Saturday, July 24, 2021
No menu items!
Home Karnataka ಸಾರಾಯಿ ಪಾಳ್ಯದಲ್ಲಿದ್ದಾಳೆ ಲೇಡಿ ಡಾನ್ ..! ಅನುಮತಿ ಇಲ್ಲದೆ ಸ್ಥಳೀಯರ ವಾಹನಗಳಿಗೂ ನೋ ಎಂಟ್ರಿ..!

ಸಾರಾಯಿ ಪಾಳ್ಯದಲ್ಲಿದ್ದಾಳೆ ಲೇಡಿ ಡಾನ್ ..! ಅನುಮತಿ ಇಲ್ಲದೆ ಸ್ಥಳೀಯರ ವಾಹನಗಳಿಗೂ ನೋ ಎಂಟ್ರಿ..!

ಬೆಂಗಳೂರಿನ ಥಣಿಸಂದ್ರದ ಸಾರಾಯಿ ಪಾಳ್ಯದಲ್ಲಿ ಒಬ್ಬ ಲೇಡಿ ಇದ್ದಾರೆ. ಅವರೊಬ್ಬರಿದ್ದರೆ ಸಾಕು ಇಡೀ ಏರಿಯಾದ ಜನತೆ ಗಪ್ ಚುಪ್ ಆಗಿಬಿಡ್ತಾರೆ. ಅಷ್ಟು ಹವಾ ಮೆಂಟೈನ್ ಮಾಡಿದ್ದಾಳೆ ಈ ಲೇಡಿ. ಈಕೆಯ ವಿಡಿಯೋ ವೈರಲ್ ಆಗಿದ್ದು, ಒಂದು ಹೆಣ್ಣು ಹೀಗೂ ಇದ್ದಾಳಾ ಎಂಬ ಪ್ರಶ್ನೆ ಹುಟ್ಟುಹಾಕಿದೆ. ವಿಡಿಯೋದಲ್ಲಿನ ದೃಶ್ಯ ನೋಡಿದ್ರೆ ಯಾವುದೋ ಸಿನಿಮಾದಲ್ಲಿ ನೋಡಿದ ಹಾಗೆ ಆಗುತ್ತೆ.
ಏರಿಯಾದಲ್ಲಿ ಪೂರ್ತಿ ಆಕೆಯದ್ದೇ ದರ್ಬಾರ್. ಆಕೆಯ ಪರ್ಮಿಷನ್ ಇಲ್ದೇ ಏರಿಯಾಗೆ ಯಾರೂ ಎಂಟ್ರಿ ಕೊಡೋ ಹಾಗಿಲ್ಲವಂತೆ. ಆಕೆಯ ವರ್ತನೆಗೆ ಬೇಸತ್ತು ಸ್ಥಳೀಯರು ದೂರು ನೀಡಿದ್ರೂ ಏನೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳಿಯರ ಬೇಸರವಾಗಿದೆ.
ದೊಣ್ಣೆ ಹಿಡಿದುಕೊಂಡು, ಬಾಯಿಗೆ ಬಂದಂಗೆ ಬೈಯುತ್ತಾ ಜನಗಳಿಗೆ ಭಯದ ವಾತಾವರಣ ಸೃಷ್ಠಿಸಿರುವ ಈಕೆ  ಮೇರಿಗೀತಾ. ದಿನಬೆಳಗ್ಗೆ ಆದ್ರೆ ಏರಿಯಾ ಮಂದಿಗೆ ಭಾರಿ ಕಾಟಕೊಡ್ತಿದ್ದಾಳಂತೆ. ಏರಿಯಾ ಒಳಗೆ ಟೂ ವೀಲರ್ ಗಾಡಿಗಳು ಬಿಟ್ಟು ಬೇರೆ ಯಾವ ಗಾಡಿಯನ್ನು ತರುವಂತಿಲ್ಲ. ಕಾರು ತಂದು ರಸ್ತೆ ಬದಿ ನಿಲ್ಲಿಸಿದ್ರೆ ಬೆಳಗಾಗೋದ್ರೊಳಗೆ ಸಂಪೂರ್ಣ ಜಖಂ ಆಗಿರುತ್ತೆ.
ಮೇರಿಗೀತಾ ಕೆಲವೊಂದಿಷ್ಟು ಗೂಂಡಾಗಳನ್ನ ಮೆಂಟೈನ್ ಮಾಡ್ತಿದ್ದಾಳೆ. ಅದೇ ಗೂಂಡಗಳನ್ನ ಕರೆಸಿ ಸ್ಥಳೀಯರಿಗೆ ತೊಂದರೆ ಕೊಡುತ್ತಿರುತ್ತಾಳಂತೆ. ಅಷ್ಟೆ ಅಲ್ಲ ಅಕ್ಕಪಕ್ಕದ ಮನೆಗಳ ಮೇಲೆ ಕಲ್ಲು ಹಾಗೂ ರಾಡ್ಗಳನ್ನ ಎಸೆದು ರಂಪಾಟ ಮಾಡುತ್ತಾಳಂತೆ. ಪ್ರತಿರೋಧ ವ್ಯಕ್ತಪಡಿಸಿದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಾಳಂತೆ. ಹೀಗಾಗಿ ನೊಂದ ಸ್ಥಳೀಯರು ಈಕೆಯ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments