Friday, January 21, 2022
No menu items!
Home Latest ಸುದೀರ್ಘ ಆಡಳಿತ ನಡೆಸಿದ್ದ ರಷ್ಯಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಪುಟಿನ್ ಚಿಂತನೆ..!

ಸುದೀರ್ಘ ಆಡಳಿತ ನಡೆಸಿದ್ದ ರಷ್ಯಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಪುಟಿನ್ ಚಿಂತನೆ..!

ಅಧ್ಯಕ್ಷ ವ್ಲಾಡಿಮರ್ ಪುಟಿನ್ ಸುದೀರ್ಘ ಆಡಳಿತ ನಡೆಸಿದವರು. ತಮ್ಮ ಅನಾರೋಗ್ಯದ ಸಮಸ್ಯೆಯಿಂದ ಮುಂದಿನ ವರ್ಷ ತಮ್ಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

68 ವರ್ಷದ ಪುಟಿನ್ ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅವರು ಮುಂದಿನ ವರ್ಷದ ಆರಂಭದಲ್ಲಿ ಅಧಿಕಾರದಿಂದ ಕೆಳಗಿಳಿಯಬಹುದು ಎಂದು ಮೂಲಗಳನ್ನ ಉಲ್ಲೇಖಿಸಿ ದ ಸನ್ ಪತ್ರಿಕೆ ಬರೆದಿದೆ.

ಬಹಳ ಮಹತ್ವಾಕಾಂಕ್ಷಿಯಾಗಿರುವ ವ್ಲಾದಿಮಿರ್ ಪುಟಿನ್ ಕಳೆದ 20 ವರ್ಷಗಳಿಂದಲೂ ಅಧಿಕಾರದಲ್ಲಿದ್ದಾರೆ. ವಿವಿಧ ಮಾರ್ಗೋಪಾಯಗಳ ಮೂಲಕ ರಾಜಕೀಯ ಅಡೆತಡೆಗಳನ್ನ ನಿವಾರಿಸಿಕೊಂಡವರು. ಸ್ಟಾಲಿನ್ ಬಿಟ್ಟರೆ ರಷ್ಯಾದಲ್ಲಿ ಇವರೇ ಅತಿ ಹೆಚ್ಚು ವರ್ಷ ಆಡಳಿತ ನಡೆಸಿರುವವರು. ಇವರು ರಾಜೀನಾಮೆ ನೀಡಲಿರುವ ವದಂತಿಗೆ ಇಂಬು ಕೊಡುವಂತೆ ಕೆಲ ದಿನಗಳ ಹಿಂದಷ್ಟೇ ಕಾನೂನು ತಿದ್ದುಪಡಿಯೊಂದನ್ನು ತರಲಾಗಿದೆ. ಅದರಂತೆ, ಪುಟಿನ್ ರಾಜೀನಾಮೆ ನೀಡಿದರೂ ಅವರು ಆಜೀವ ಸೆನೆಟರ್ ಆಗಿ ಇರವಂತೆ ಕಾನೂನು ರೂಪಿಸಲಾಗಿದೆ. ಹಾಗೆಯೇ, ಅವರು ಸಾಯುವವರೆಗೂ ಅವರನ್ನ ತನಿಖೆಗೆ ಒಳಪಡಿಸಲು ಸಾಧ್ಯವಿಲ್ಲದ ಕಾನೂನನ್ನೂ ರೂಪಿಸುವ ಪ್ರಯತ್ನ ನಡೆದಿದೆ. ಇವೆಲ್ಲವೂ ಅವರ ರಾಜೀನಾಮೆಯ ಸಾಧ್ಯತೆಯ ಸುಳಿವನ್ನು ನೀಡುತ್ತದೆ.

ರಷ್ಯಾ ಅಧ್ಯಕ್ಷರ ಕಚೇರಿಯಿಂದ ಈ ಸುದ್ದಿಗಳನ್ನ ಅಲ್ಲಗಳೆಯಲಾಗಿದೆ. ಪುಟಿನ್ ಅವರಿಗೆ ಪಾರ್ಕಿನ್ಸನ್ ಕಾಯಿಲೆ ಇಲ್ಲ. ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ತಿಳಿಸಲಾಗಿದೆ. ಕುದುರೆ ಸವಾರಿ, ಐಸ್ ಹಾಕಿ ಇತ್ಯಾದಿ ಕ್ರೀಡೆಗಳನ್ನ ತಾನು ತೊಡಗಿಸಿಕೊಂಡಿರುವ ಚಿತ್ರಗಳನ್ನ ಪುಟಿನ್ ಅವರು ಸ್ವತಃ ಶೇರ್ ಮಾಡಿ ತಾವು ಫಿಟ್ ಅಂಡ್ ಫೈನ್ ಆಗಿರುವುದಾಗಿ ಹೇಳಿದ್ದಾರೆ.

ಪಾರ್ಕಿನ್ಸನ್ ಕಾಯಿಲೆ ಬಂದ ವ್ಯಕ್ತಿಯ ದೈಹಿಕ ಸಮತೋಲನ ತಪ್ಪುತ್ತದೆ. ಇದು ಮಿದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ದೇಹದ ಮೇಲೆ ಮಿದುಳು ಹೊಂದಿರುವ ನಿಯಂತ್ರಣ ದುರ್ಬಲಗೊಳ್ಳುತ್ತದೆ. ತತ್ಪರಿಣಾಮವಾಗಿ ಪಾರ್ಕಿನ್ಸ್ ರೋಗಿ ನಡೆದಾಡಲು ಮತ್ತು ಮಾತನಾಡಲು ಅತೀವ ಕಷ್ಟಪಡುತ್ತಾನೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments