ಬೆಂಗಳೂರು : ಆರ್ ಆರ್ ನಗರ ಉಪಚುನಾವಣೆ ಹಾಗೂ ತುಮಕೂರಿನ ಶಿರಾ ಉಪಚುನಾವಣೆಗೆ ದಿನಗಣನೆ ಶುರುವಾಗಿದ್ದು, ಅಬ್ಬರದ ಪ್ರಚಾರ ನಡೆಯುತ್ತಿದೆ. ಮೂರು ಪಕ್ಷಗಳು ತಮ್ಮ ತಮ್ಮ ಅಭ್ಯರ್ತೀಗಳ ಗೆಲುವಿಗಾಗಿ ಓಡಾಡುತ್ತಿದ್ದಾರೆ. ಇದೀಗ ದೇವೇಗೌಡರ ಕುಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಕೂಡ ಪ್ರಚಾರದ ಕಣಕ್ಕೆ ಧುಮುಕಿದ್ದಾರೆ.
ಈಗಾಗಲೇ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಪ್ರಚಾರದ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ನಿಖಿಲ್ ಕುಮಾರಸ್ವಾಮಿ ಕೂಡ ಪ್ರಚಾರ ಮಾಡಲು ಆರಂಭಿಸಿದ್ದಾರೆ. ಪ್ರಚಾರಕ್ಕೆ ಹಾಜರಾಗುವುದಕ್ಕು ಮುನ್ನ ಸ್ಫಟಿಕ ಪುರಿಯ ಶ್ರೀಕ್ಷೇತ್ರ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಆನಂತರ ಶ್ರೀ ಮಠದ ನಂಜಾವಧೂತ ಸ್ವಾಮಿಗಳ ಆಶೀರ್ವಾದವನ್ನು ತೆಗೆದುಕೊಂಡಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸತ್ಯನಾರಾಯಣ ಅವರ ಪರ ನಿಖಿಲ್ ಕುಮಾರಸ್ವಾಮಿ ಇಂದು ಮೊದಲ ಪ್ರಚಾರ ಆರಂಭಿಸಲಿದ್ದಾರೆ.
ಬೆಂಗಳೂರಿನ ಆರ್ ಆರ್ ನಗರದಲ್ಲೂ ತಮ್ಮ ಪಕ್ಷದ ಅಭ್ಯರ್ಥಿ ಪರ ನಡೆಸುತ್ತಾರಾ ನೋಡಬೇಕಿದೆ. ಯಾಕಂದ್ರೆ ಮುನಿರತ್ನ ಕೂಡ ಅದೇ ಕ್ಷೇತ್ರದಲ್ಲಿ ನಿಂತಿದ್ದು, ನಿಖಿಲ್ ಕುಮಾರಸ್ವಾಮಿ ಅವರ ಸಿನಿಮಾವನ್ನ ನಿರ್ಮಾಣ ಮಾಡಿದ್ದವರಾಗಿದ್ದಾರೆ. ಮುಂದೆ ಇನ್ನು ಎರಡು ನಿಖಿಲ್ ಸಿನಿಮಾಗಳನ್ನು ನಿರ್ಮಿಸುವುದಾಗಿ ಹೇಳಿಕೊಂಡಿದ್ದಾರೆ. ಹಿಗಿರುವಾಗ ಸಿನಿಮಾ ಬೇರೆ ರಾಜಕೀಯ ಬೇರೆ ಎನ್ನುವ ಹಾಗೇ ನಿಖಿಲ್ ನೋಡ್ತಾರಾ..? ಯಾರ ಪರ ಪ್ರಚಾರ ಮಾಡ್ತಾರೆ ಅನ್ನೋದನ್ನ ನೋಡಬೇಕು..
ರಾಜಕೀಯ ಬಿಟ್ಟು ಸಂಪೂರ್ಣ ಸಿನಿಮಾ ಕಡೆಗೆ ನಿಖಿಲ್ ಗಮನ ಕೊಡ್ತಾರೆ ಅನ್ನೋ ಮಾತಿತ್ತು. ಆದ್ರೆ ಇದೀಗ ಆ ಸುದ್ದಿಯನ್ನು ತೆಗೆದು ಹಾಕಿ, ರಾಜಕೀಯದಲ್ಲು ತೊಡಗಿಸಕೊಳ್ಳುತ್ತಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಇಂದಿನಿಂದ ನಿಖಿಲ್ ಕುಮಾರಸ್ವಾಮಿ ಧುಮುಕ್ಕಿದ್ದಾರೆ.