ಕೇರಳ : ಸುಮಾರು ವರ್ಷಗಳಿಂದ ಈ ವೆಡ್ಡಿಂಗ್ ಫೋಟೋಶೂಟ್ ಅನ್ನೊದು ಎಲ್ಲರಿಗು ಕ್ರೇಜ್ ಆಗೋಗಿದೆ. ಡಿಫ್ರೆಂಟ್ ಡಿಫ್ರೆಂಟ್ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಒಳ್ಳೊಳ್ಳೆ ಲೋಕೇಶ್ ಗೆ ಹೋಗಿ ವಿಡಿಯೋ, ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಆದರೆ ಇನ್ನು ಒಂದಷ್ಟು ಮಂದಿ ಯಾರು ಮಾಡದ ರೀತಿ, ಯಾರು ಹೋಗದ ಜಾಗಕ್ಕೆ ಹೋಗಿ ಫೋಟೋ ಶೂಟ್ ಮಾಡಿಸಿಕೊಳ್ಳಬೇಕೆಂಬ ಆಸೆ ಹೊಂದಿರುತ್ತಾರೆ. ಡಿಫ್ರೆಂಟ್ ಅಂತ ಯೋಚಿಸಿದ ದಂಪತಿಯ ಫೋಟೋಶೂಟ್ ಇದೀಗ ವಯರಲ್ ಆಗಿದೆ.

ನವ ಜೋಡಿ ರಿಶಿ ಕಾರ್ತಿಕೇಯನ್ ಮತ್ತು ಲಕ್ಷ್ಮೀ ದಂಪತಿ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ. ಕೊರೊನಾ ಇದ್ದ ಕಾರಣ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ಜೋಡಿ ಮಾದಕ ಫೋಟೊಶೂಟ್ ಮಾಡಿಸಿದ್ದಾರೆ. ವಿಭಿನ್ನ ಕಲ್ಪನೆಯೊಂದಿಗೆ ದಂಪತಿ ಅರ್ಧಂಬರ್ಧ ಉಡುಪು ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಹನಿಮೂನ್ ಹಿನ್ನೆಲೆಯಲ್ಲಿ ದಂಪತಿ ಕಳೆದ ವಾರ ಕೇರಳದ ಇಡುಕ್ಕಿಗೆ ತೆರಳಿದ್ದಾರೆ. ಅದರ ನಡುವೆಯೇ ವ್ಯಾಗಮೋನ್ ಟೀ ಎಸ್ಟೇಟ್ನಲ್ಲಿ ಸುಂದರ ಫೋಟೊಶೂಟ್ ಮಾಡಿಸಿದ್ದಾರೆ.

ಲೋಕೇಷನ್, ಕಾಸ್ಟ್ಯೂಮ್ ಎಲ್ಲವು ಸಿಂಪಲ್ ಆಗಿದ್ದು, ಎಕ್ಸ್ ಪ್ರೆಷನ್ ಮಾತ್ರ ಸಖತ್ ಡಿಫ್ರೆಂಟ್ ಆಗಿ ಕೊಟ್ಟಿದ್ದಾರೆ. ರೊಮ್ಯಾಂಟಿಕ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ. ಈ ಫೋಟೋಸ್ ಗಳನ್ನು ದಂಪತಿ ತಮ್ಮ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದು, ಇದಕ್ಕೆ ಅಶ್ಲೀಲ ಕಮೆಂಟ್ಗಳು ಹರಿದು ಬಂದಿವೆ. ಕೆಲವೇ ಮಂದಿ ದಂಪತಿ ಫೋಟೋಗಳನ್ನು ಮೆಚ್ಚಿಕೊಂಡರೆ, ಬಹುತೇಕರು ಕೆಟ್ಟದ್ದಾಗಿ ಕಮೆಂಟ್ ಮಾಡಿದ್ದಾರೆ.

ಟ್ರೋಲಿಗರ ಕಾಮೆಂಟ್ ವಿರುದ್ಧ ಸಿಡಿದೆದ್ದ ದಂಪತಿ, ನಮ್ಮ ಫೋಟೋ, ನಮ್ಮಿಷ್ಟ ನೀವ್ಯಾರೂ ಕೇಳುವುದಕ್ಕೆ ಎಂದಿದ್ದಾರೆ. ಈ ರೀತಿ ಫೋಟೋಶೂಟ್ ಮಾಡಿಸಲು ನಮ್ಮ ಮನೆಯವರೇ ನಮ್ಮನ್ನು ವಿರೋಧಿಸಲಿಲ್ಲ ಎಂದು ಸಮರ್ಥನೆಯನ್ನೂ ನೀಡಿದ್ದಾರೆ.