Friday, September 24, 2021
No menu items!
Home Karnataka ಸಬ್ ಇನ್ಸ್‌ಪೆಕ್ಟರ್ ಕೆಲಸದಿಂದ ನಿವೃತ್ತಿ, ಲಕ್ಷ ಲಕ್ಷ ಹಣ ಇದ್ರು ಚಿಂದಿ ಹಾಯುವ ಜೀವನವೇ ಬೆಸ್ಟ್...

ಸಬ್ ಇನ್ಸ್‌ಪೆಕ್ಟರ್ ಕೆಲಸದಿಂದ ನಿವೃತ್ತಿ, ಲಕ್ಷ ಲಕ್ಷ ಹಣ ಇದ್ರು ಚಿಂದಿ ಹಾಯುವ ಜೀವನವೇ ಬೆಸ್ಟ್ ಎಂದ ವ್ಯಕ್ತಿ..!

ಚಿಕ್ಕಬಳ್ಳಾಪುರ: ಅಕೌಂಟ್ ನಲ್ಲಿ ಲಕ್ಷ ಲಕ್ಷ ಹಣ ಇದ್ರೆ ಕೂತು ತಿನ್ನುವವರೇ ಹಾಗು ಚ್ಚು. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ತಿಂಗಳಿಗೆ 9 ಸಾವಿರ ಸರ್ಕಾರದಿಂದ ಪೆನ್ಶನ್ ಬಂದರೂ ಚಿಂದಿ ಹಾಯ್ದು ತಿನ್ನುವ ಬದುಕು ನೆಮ್ಮದಿ ಅನ್ನಿಸುತ್ತಿದೆ ಅಂತಾರೆ.

ಹೌದು ಇದು ವಿಚಿತ್ರ ಅನ್ಸಿದ್ರು ಸತ್ಯ. ಆದ್ರೆ ಅದಕ್ಕು ಒಂದು ಕಾರಣ ಇದೆ. ಇವರ ಹೆಸರು ಮಧುಸೂದನ್. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ರು. ಆನಂತರ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ನೆಮ್ಮದಿ ಜೀವನ ಸಾಗಿಸೋಣ ಅಂತ ನಿರ್ಧಾರ ಮಾಡಿದ್ರು.

ದಿನ ಕಳೆಯುತ್ತಿದ್ದಂತೆ ಅವರ ಹೆಂಡತಿ ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಬಿಟ್ಟಿದ್ದಾರೆ. ಆ ನೋವು ಮಧುಸೂದನ್ ಅವರನ್ನ ವಿಪರೀತ ಬಾಧಿಸಿದ್ದು, ಕುಡಿತಕ್ಕೆ ದಾಸನನ್ನಾಗಿಸಿದೆ. ಇದೆ ಚಟ ಮನೆಯಲ್ಲಿದ್ದ ಮಕ್ಕಳಿಗೆ ಕಿರಿಕಿರಿ ಉಂಟು ಮಾಡಿದೆ. ಕೊನೆಗೆ ಮನೆ ಬಿಟ್ಟು ಬಂದ ಮಧುಸೂದನ್ ಬೀದಿ ಬೀದಿಯಲ್ಲಿ ಚಿಂದಿ ಹಾಯ್ದು ಜೀವನ ನಡೆಸೋದಕ್ಕೆ ಶುರು ಮಾಡಿದ್ದಾರೆ.

ಪ್ರತಿ ತಿಂಗಳ ಅವರ ಅಕೌಂಟ್ ಗೆ ಸರ್ಕಾರದದಿಂದ ಪೆನ್ಶನ್ ಕೂಡ ಬರುತ್ತೆ. ಆದ್ರೆ ಇಲ್ಲಿವರೆಗೆ ಅದನ್ನ ತೆಗೆದುಕೊಂಡಿಲ್ಲ ಬದಲಿಗೆ ಚಿಂದಿ ಹಾಯ್ದು ಅದರಿಂದ ಬಂದ ಹಣದಿಂದಲೇ ಊಟ_ತಿಂಡಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಈ ವಿಷಯ ತಿಳಿದು ಅವರಿಗೆ ಸುಂದರ ಬದುಕು ಕಟ್ಟಿಕೊಡೋದಕ್ಕೆ ಹೋಗಿದ್ದಾರೆ. ಆದ್ರೆ ಅದನ್ನು ಒಪ್ಪದ ಮಧುಸೂದನ್ ಚಿಂದಿ ಹಾಯುವುದೆ ಸುಂದರ ಬದುಕಿ ಎನಿಸಿದೆ ಎಂದಿದ್ದಾರೆ.

ಏನಿದ್ದರೇನಂತೆ ನೆಮ್ಮದಿಯೇ ಇಲ್ಲ ಎಂದಾಗ. ಲಕ್ಷ ಲಕ್ಷ ಹಣ ಅಕೌಂಟ್ ನಲ್ಲಿದ್ದರು ಅದು ಆತನಿಗೆ ನೆಮ್ಮದಿ ನೀಡಿಲ್ಲ. ಆದ್ರೆ ಆ ಚಿಂದಿ ಹಾಯುವ ಕೆಲಸ ನೆಮ್ಮದಿ ನೀಡಿದೆ. ಜೀವನದಲ್ಲಿ ಮುಖ್ಯವಾಗಿ ಬೇಕಾಗಿರೋದು ಅದೆ ಅಲ್ವಾ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments