ಎಷ್ಟೇ ಬೆಳೆದರೂ , ಎಲ್ಲಿಯೇ ಹೋದರೂ ಹುಟ್ಟೂರಿನ ಮೇಲೆ ಎಲ್ಲರಿಗೂ ಒಂದು ರೀತಿಯ ಮೋಹ ಇದ್ದೆ ಇರುತ್ತೆ. ಅದರಂತೆ ಕೆ.ಜಿ.ಎಫ್ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರು ಕೂಡ ತಮ್ಮ ಹುಟ್ಟೂರಿನಲ್ಲಿ ಇಷ್ಟ ಪಟ್ಟ ಕೆಲಸ ಮಾಡಿದ್ದಾರೆ.
ರವಿ ಬಸ್ರೂರು ಹುಟ್ಟೂರನ್ನು ಬಿಟ್ಟು ಬೆಂಗಳೂರಿಗೆ ಬರುವಾಗ ಮತ್ತೆ ಹಳ್ಳಿಗೆ ಹಿಂತಿರುಗಿ ಬರುವುದಾಗಿ ಮಾತುಕೊಟ್ಟಿದ್ದರಂತೆ. ಕೊಟ್ಟ ಮಾತಿನಂತೆ ಈಗ ಅವರು ಗೂಡಿಗೆ ಮರಳಿದ್ದಾರೆ. ಅಲ್ಲೇ ತಮ್ಮ ಕೆಲಸ ಆರಂಭಿಸಿದ್ದಾರೆ. ಬೆಂಗಳೂರಿನಲ್ಲೂ ಒಂದು ಸ್ಟುಡಿಯೋ ಇದೆ. ಆದರೆ ಈಗ ಸುಸಜ್ಜಿತವಾದ ದೊಡ್ಡ ಮ್ಯೂಸಿಕ್ ಸ್ಟುಡಿಯೋವನ್ನು ನಿರ್ಮಿಸಿದ್ದಾರೆ.
https://www.instagram.com/p/CHmh_w8g3nz/?utm_source=ig_web_copy_link
ಬಸ್ರೂರಿನಲ್ಲಿ ಒಂದು ಎಕರೆ ಜಾಗದಲ್ಲಿ ತಮ್ಮ ಮನೆಯ ಬಳಿಯೇ ರವಿ ಬಸ್ರೂರು ಅವರು ಮ್ಯೂಸಿಕ್ ಸ್ಟುಡಿಯೋ ನಿರ್ಮಿಸಿದ್ದಾರೆ. ಇಲ್ಲಿ ಲೈವ್ ರೆಕಾಡಿಂಗ್ ಮಾಡಲು ದೊಡ್ಡದಾದ ಓಪನ್ ಸ್ಟುಡಿಯೋ, ಕಂಪೋಸಿಂಗ್, ಡಬ್ಬಿಂಗ್ ಸೇರಿದಂತೆ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ. ಸ್ಟುಡಿಯೋ ಕೆಲಸ ಮುಗಿದಿದೆ. ಅಲ್ಲಿ ಈಗಾಗಲೇ ಅಲ್ಲಿ ಕೆಜಿಎಫ್ ಚಾಪ್ಟರ್ 2 ಹಾಗೂ ಕಬ್ಜ ಸಿನಿಮಾದ ಕೆಲಸಗಳು ನಡೆಯುತ್ತಿವೆ.
ರವಿ ಬಸ್ರೂರು ಸಂಗೀತ ನಿರ್ದೇಶನದ ಜತೆಗೆ ಸಿನಿಮಾಗಳನ್ನೂ ನಿರ್ದೇಶಿಸುತ್ತಾರೆ. ಅವರೇ ಆ್ಯಕ್ಷನ್ ಕಟ್ ಹೇಳಿರುವ ‘ಗಿರ್ಮಿಟ್’ ಸಿನಿಮಾ ಇತ್ತೀಚೆಗಷ್ಟೆ ತೆರೆ ಕಂಡಿದೆ.