Friday, May 14, 2021
No menu items!
Home Karavali 'ಗುಡ್ಡದ ಭೂತ' ಖ್ಯಾತಿಯ ಪ್ರಖ್ಯಾತ ಸಾಹಿತಿ, ರಂಗಕರ್ಮಿ ಪ್ರೊ. ಮಾಧವ ಆಚಾರ್ಯ ಇನ್ನಿಲ್ಲ

‘ಗುಡ್ಡದ ಭೂತ’ ಖ್ಯಾತಿಯ ಪ್ರಖ್ಯಾತ ಸಾಹಿತಿ, ರಂಗಕರ್ಮಿ ಪ್ರೊ. ಮಾಧವ ಆಚಾರ್ಯ ಇನ್ನಿಲ್ಲ

ಉಡುಪಿ: ಹೆಸರಾಂತ ಸಾಹಿತಿ, ಖ್ಯಾತ ರಂಗಕರ್ಮಿ ಪ್ರೊ.ಉದ್ಯಾವರ ಮಾಧವ ಆಚಾರ್ಯ(80) ಅವರು ವಯೋಸಹಜ ಖಾಯಿಲೆಯಿಂದ ಇಂದು ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ರಂಗ ನಿರ್ದೇಶಕರಾಗಿ, ಕಥೆಗಾರ, ಕವಿಯಾಗಿ, ನಟರಾಗಿದ್ದ ಅವರು ಉಡುಪಿಯ ಸಮೂಹ ಸಂಸ್ಥೆ ಸಂಸ್ಥಾಪಕರಾಗಿ, ನಾಟಕ, ನೃತ್ಯ ರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ್ದರು. ನಾಡಿನಾದ್ಯಂತ 50 ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಹೊಂದಿರುವ ಉದ್ಯಾವರ ಮಾಧವಾಚಾರ್ಯರು ರಾಜ್ಯೋತ್ಸವ, ರಂಗ ವಿಶಾರದ ಪ್ರಶಸ್ತಿಗೆ ಭಾಜನರಾಗಿದ್ದರು.

ಬಾಗಿದ ಮರ, ಭಾಗದೊಡ್ಡಮ್ಮನ ಕಥೆ ಮುಂತಾದ ಕಥಾ ಸಂಕಲನಗಳು, ರಂಗಸ್ಥಳದ ಕನವರಿಕೆಗಳು ಮುಂತಾದ ಕವನ ಸಂಕಲಗಳು, ಕೃಷ್ಣ ಸೋಲು, ಗೋಡೆ, ಗಾಂಧಾರಿ, ರಾಧೆ ಎಂಬ ಗಾಥೆ ಮುಂತಾದ ನಾಟಕಗಳನ್ನು ಅವರು ರಚಿಸಿ ರಂಗದಲ್ಲಿ ಪ್ರಯೋಗಿಸಿದ್ದರು.

ದೂರದರ್ಶನದಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ‘ಗುಡ್ಡದ ಭೂತ’ ದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಇದು ಇವರಿಗೆ ಬಹಳ ದೊಡ್ದ ಹೆಸರು ಗಳಿಸಿಕೊಟ್ಟಿತು.

1941ರ ಫೆಬ್ರವರಿ 25ರಂದು ಜನಿಸಿದ್ದ ಪ್ರೊ.ಉದ್ಯಾವರ ಮಾಧವ ಆಚಾರ್ಯ ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments