ಬೆಂಗಳೂರು: ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಮತ ಎಣಿಕೆಯಲ್ಲಿ ಪ್ರತಿ ಹಂತದಲ್ಲೂ ಬಿಜೆಪಿ ಎರಡು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಬಿಜೆಪಿ ನಾಯಕರು ಸಂಭ್ರಮದಲ್ಲಿದ್ದಾರೆ. ಈಗಾಗಲೇ ಆರ್ ಆರ್ ನಗರದಲ್ಲಿ ಮುನಿರತ್ನ ಮನೆ ಎದುರು ಜಮಾಯಿಸಿರುವ ಬಿಜೆಪಿ ಬೆಂಬಲಿಗರು ಸಿಹಿ ಹಂಚಿ, ನೃತ್ಯ ಮಾಡಿ ಸಂಭ್ರಮಿಸುತ್ತಿದ್ದಾರೆ.
ಕಂದಾಯ ಸಚಿವ ಆರ್ ಅಶೋಕ್ ಕೂಡ ಈ ಖುಷಿಯನ್ನು ಸಂಭ್ರಮಿಸಿದ್ದು, ಸಿಎಂ ನಿವಾಸಕ್ಕೆ ತೆರಳಿ ಸಂಭ್ರಮ ಹಂಚಿಕೊಂಡಿದ್ದಾರೆ. ಸ್ವೀಟ್ ಬಾಕ್ಸ್ ಹಿಡಿದು ಸಿಎಂ ನಿವಾಸಕ್ಕೆ ತೆರಳಿದ ಆರ್ ಅಶೋಕ್ ಎಲ್ಲರಿಗೂ ಸಿಹಿ ಹಂಚಿ, ಸಿಎಂ ಗೆ ಸ್ವತಃ ಸಿಹಿ ತಿನಿಸಿ ಖುಷಿ ಪಟ್ಟಿದ್ದಾರೆ. ಮುನಿರತ್ನ ಅವರ ಗೆಲುವು ಬಹುತೇಕ ಪಕ್ಕಾ ಆಗಿದ್ದು, ವಿಕ್ಟರಿ ಸಿಂಬಲ್ ತೋರಿಸುವ ಮೂಲಕ ಜಯದ ಖುಷಿಯಲ್ಲಿದ್ದಾರೆ.
ಈಗಾಗಲೇ ಆರ್ ಆರ್ ನಗರದಲ್ಲಿ 14ನೇ ಸುತ್ತು ಮುಗಿದಿದ್ದು, ಅದರಲ್ಲಿ ಬಿಜೆಪಿ ಮುನಿರತ್ನ 34,517 ಮತ ಗಳಿಸಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 39,415 ಮತ ಗಳಿಸಿದ್ದಾರೆ. ಜೆಡಿಎಸ್ ನ ಕೃಷ್ಣಮೂರ್ತಿ 4,660 ಮತ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಶಿರಾದಲ್ಲಿ 12ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ನ ಟಿ ಬಿ ಜಯಚಂದ್ರ 29,938, ಬಿಜೆಪಿಯ ರಾಜೇಶ್ ಗೌಡ 37,808 ಮತ ಗಳಿಸಿದ್ದಾರೆ. ಜೆಡಿಎಸ್ ನಾ ಅಮ್ಮಾಜಮ್ಮ 19, 522