Monday, January 24, 2022
No menu items!
Home Bharata ಟ್ವಿಟರ್ ನಲ್ಲಿ ಪಿವಿ ಸಿಂಧು ಕೊಟ್ಟ ಶಾಕ್ ಏನು ಗೊತ್ತಾ..?

ಟ್ವಿಟರ್ ನಲ್ಲಿ ಪಿವಿ ಸಿಂಧು ಕೊಟ್ಟ ಶಾಕ್ ಏನು ಗೊತ್ತಾ..?

ದೆಹಲಿ: ಹೆಮ್ಮಾರಿ ಕೊರೋನಾದಿಂದ ಸ್ಥಗಿತಗೊಂಡಿದ್ದ ಹಲವು ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಸಿನಿಮಾ, ಕ್ರೀಡೆ ಸೇರಿದಂತೆ ಹಲವು ಚಟುವಟಿಕೆಗಳು ಆರಂಭವಾಗುತ್ತಿದ್ದು, ತಮ್ಮ ನೆಚ್ಚಿನ ತಾರೆಯರನ್ನು ನೋಡಲು ಅಭಿಮಅನಿಗಳು ಕಾತುರರಾಗಿದ್ದಾರೆ. ಆದರೆ, ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ತನ್ನ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.


ನೆಚ್ಚಿನ ಕ್ರೀಡಾ ತಾರೆಯರನ್ನು ಕ್ರೀಡಾಂಗಣದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದರ ನಡುವೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸಾಮಾಜಿಕ ಜಾಲತಾಣದಲ್ಲಿ ನಾನು ನಿವೃತ್ತಿಯಾಗುತ್ತಿದ್ದೇನೆ ಎಂಬ ಪೋಸ್ಟ್ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಪಿವಿ ಸಿಂಧು ನಿವೃತ್ತಿಯಾಗುತ್ತಿದ್ದೇನೆ ಎಂದಿರುವುದು ನಿಜ. ಆದರೆ ಕ್ರೀಡೆಯಿಂದಲ್ಲ, ಬದಲಾಗಿ ಜಗತ್ತಿನ ಅಶಾಂತಿಯಿಂದ, ಕೆಟ್ಟ ಪರಿಸ್ಥಿತಿಯಿಂದ, ಭಯದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಪಿವಿ ಸಿಂಧು ಹೇಳಿದ್ದಾರೆ.

ಟ್ವಿಟರ್ ಮೂಲಕ ನಾವು ನಿವೃತ್ತಿಯಾಗುತ್ತಿದ್ದೇನೆ ಎಂದು ಪಿವಿ ಸಿಂಧೂ ಪೋಸ್ಟ್ ಅಭಿಮಾನಿಗಳಿಗೆ ಆಘಾತ ತಂದಿತ್ತು. ಇಷ್ಟೇ ಅಲ್ಲ, ಫಿಟ್ನೆಸ್, ಇಂಜುರಿ ಕಾರಣಗಳನ್ನು ಮುಂದಿಟ್ಟ ಸಿಂದೂ ಬ್ಯಾಡ್ಮಿಂಟನ್ನಿಂದ ನಿವೃತ್ತಿಯಾಗುತ್ತಿರುವಂತೆ ಬರೆದುಕೊಂಡಿದ್ದಾರೆ. ಡೆನ್ಮಾರ್ಕ್ ಒಪನ್ ನನ್ನ ಕೊನೆಯ ಪ್ರವಾಸ ಎಂದು ಆರಂಭಿಸಿದ ಸಿಂಧೂ, ನನ್ನ ದೊಡ್ಡ ಬರಹವನ್ನು ಸಂಪೂರ್ಣ ಒದಿದಾಗ ನಿಮಗೆ ಅಚ್ಚರಿಯಾಗಬಹುದು. ಈ ಲಾಕ್ ಡೌನ್ ಹಲವು ಪಾಠಗಳನ್ನು ಕಲಿಸಿದೆ. ಹಲವು ದಿನಗಳಿಂದ ಮನೆಯಲ್ಲೇ ಇದ್ದೇನೆ. ಡೆನ್ಮಾರ್ಕ್ ಒಪನ್ನೊಂದಿಗೆ ವಿದಾಯ ಹೇಳುತ್ತಿದ್ದೇನೆ ಎಂಬ ಅರ್ಧದಲ್ಲಿ ಬರೆದುಕೊಂಡಿದ್ದಾರೆ. ಆದರೆ ಅಂತ್ಯದಲ್ಲಿ ಪಿವಿ ಸಿಂಧೂ ಹೇಳ ಹೊರಟಿರುವ ಅಸಲಿ ವಿಚಾರವನ್ನು ಹೇಳಿದ್ದಾರೆ.

ಬರಹದ ಅಂತ್ಯದಲ್ಲಿ ನಾನು ವೈರಸ್ ಕುರಿತಿರುವ ಅಸಡ್ಡೆ, ಶುಚಿತ್ವದೆಡೆಗಿರುವ ನಿರ್ಲಕ್ಷ್ಯತನದಿಂದ ನಿವೃತ್ತಿಯಾಗಲು ಬಯಸುತ್ತೇನೆ. ನಾನು ಅಶಾಂತಿಯಿಂದ ಕೂಡಿದ ಈ ಜಗತ್ತಿನ ಮನಸ್ಥಿತಿಯಿಂದ ನಿವೃತ್ತಿಯಾಗಲು ಬಯಸುತ್ತೇನೆ. ಋಣಾತ್ಮಕ ಅಂಶಗಳಿಂದ, ಕೆಟ್ಟ ಆಲೋಚನೆಗಳಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಪಿವಿ ಸಿಂಧು ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ತಾನು ಕ್ರೀಡೆಯಿಂದ ನಿವೃತ್ತಿಯಾಗುತ್ತಿಲ್ಲ. ಬದಲಾಗಿ ಮತ್ತಷ್ಟು ಬಲಿಷ್ಠವಾಗಿ ಮುಂದಿನ ಟೂರ್ನಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಪಿವಿ ಸಿಂಧು ಟ್ವೀಟ್, ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಹಲವರು ಸಿಂಧು ನಿವೃತ್ತಿಯಾಗಿದ್ದಾರೆ. ಅವರ ಮುಂದಿನ ವಿಶ್ರಾಂತಿ ಜೀವನಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಇನ್ನು ಹಲವರು ಇಷ್ಟು ಬೇಗ ನಿವೃತ್ತಿಯಾಗಬಾರದು. ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಮನವಿ ಮಾಡಿದ್ದಾರೆ. ಆದರೆ ಅಸಲಿಗೆ ಸಿಂಧು ವಿದಾಯ ಹೇಳಿಲ್ಲ. ಸಿಂಧು ಟ್ವೀಟ್ ಗೊಂದಲ ಸೃಷ್ಟಿಸಿ ಹಲವರ ತೆಲೆಕೆಡಿಸಿದ್ದಂತೂ ಸುಳ್ಳಲ್ಲ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments