ಪುತ್ತೂರು: ಬೈಕ್ ವೊಂದಕ್ಕೆ ಪಿಕಪ್ ವಾಹನ ಡಿಕ್ಕಿಯಾಗಿದೆ. ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿನ್ನೆ ತಡರಾತ್ರಿ ಉಪ್ಪಿನಂಗಡಿಯಲ್ಲಿ ಈ ಘಟನೆ ನಡೆದಿದೆ.
ಕನ್ಸ್ಟ್ರಕ್ಷನ್ ಸೂಪರ್ ವೈಸರ್ ಆಗಿದ್ದ ಕೃಷ್ಣ ಪ್ರಸಾದ್ ಶೆಟ್ಟಿ ಹಾಗೂ ಜಯರಾಮ್ಗೌಡ ಮೃತ ಸವಾರರು.
ದ್ವಿಚಕ್ರ ವಾಹನದಲ್ಲಿ ಕೃಷ್ಣ ಪ್ರಸಾದ್ ಶೆಟ್ಟಿ ಹಾಗೂ ಜಯರಾಮ್ಗೌಡ ಇಬ್ಬರೂ ತಮ್ಮ ಮನೆಗೆ ತೆರಳುತ್ತಿದ್ದಾರು. ಹಿಂದಿನಿಂದ ಬಂದ ಪಿಕಪ್ ವಾಹನ ವೇಗವಾಗಿ ಬಂದಿದೆ. ಪರಿಣಾಮ ಮುಂದೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನ್ನೀರ್ಪಂತ ಗ್ರಾಮ ಅಲೈಕ್ ರಸ್ತೆಯಲ್ಲಿ ಪತ್ತೆ ಮಾಡಲಾಗಿದೆ.