ಸೆಲೆಬ್ರೆಟಿಗಳು ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಹೀಗಾಗಿ ಸೋಷಿಯಲ್ ಮೀಡಿಯಾ ಅನ್ನೋದು ತುಂಬಾನೇ ಸಹಾಯವಾಗುತ್ತದೆ. ಆದ್ರೆ ಕೆಲವೊಮ್ಮೆ ಅಭಿಮಾನಿಗಳೋ ಅಥವಾ ಅಭಿಮಾನಿಗಳ ಹೆಸರಲ್ಲೋ ಮಾಡುವ ಕಮೆಂಟ್ ಗಳು ಸೆಲೆಬ್ರೆಟಿಗಳಿಗೆ ನೋವನ್ನು ತರಿಸುತ್ತವೆ. ಇಂಥದ್ದೇ ಸನ್ನಿವೇಶವನ್ನ ಇದೀಗ ಕಣ್ಸನ್ನೇ ಹುಡುಗಿ ಎದುರಿಸಿದ್ದಾರೆ.

ಟ್ರೋಲಿಗರಿಗೆ ಹೆಚ್ಚು ಬಳಕೆ ಆಗೋದು ಸೆಲೆಬ್ರೆಟಿಗಳ ಫೋಟೋಸ್ ಗಳೇ. ಪ್ರಿಯಾ ಪ್ರಕಾಶ್ ವಾರಿಯರ್ ಫೋಟೋಸ್ ಕೂಡ ಟ್ರೋಲ್ ಗೆ ಒಳಗಾಗಿದೆ.

ಇತ್ತೀಚೆಗೆ ಪ್ರಿಯಾ ವಾರಿಯರ್ ಎದೆ ಸೀಳು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಆ ಫೋಟೋಗಳು ಟ್ರೋಲಿಗರ ಕೈಗೆ ಸಿಕ್ಕಿವೆ. ಜೊತೆಗೆ ಫೋಟೋಗೆ ಅನೇಕರು ಕಮೆಂಟ್ ಕೂಡ ಹಾಕಿದ್ದಾರೆ. ಅದಕ್ಕೆಲ್ಲಾ ಪ್ರಿಯಾ ವಾರಿಯರ್ ಶಾಂತವಾಗಿಯೇ ಉತ್ತರ ನೀಡಿದ್ದಾರೆ.

ಈ ರೀತಿ ಫೋಟೋಗಳನ್ನು ಹಾಕುವ ಅವಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ನಟಿ ಪ್ರಿಯಾ ವಾರಿಯರ್, ನಾನು ನನ್ನ ಪೋಸ್ಟ್ ನಲ್ಲಿ ಕೆಲವು ಕಮೆಂಟ್ ಗಳನ್ನ ನೋಡಿದೆ.

ನಾನು ಸಾಮಾನ್ಯವಾಗಿ ಕಮೆಂಟ್ ಗಳನ್ನ ನೋಡುವುದಿಲ್ಲ. ಆದ್ರೆ ಆರಂಭದಲ್ಲೇ ಅಶ್ಲೀಲ ಕಮೆಂಟ್ ಗಳು ಕಂಡಿದ್ದ ಕಾರಣ ಉತ್ತರಿಸಲೇ ಬೇಕಾಯಿತು ಎಂದು ಹೇಳಿದ್ದಾರೆ.

ನನಗೆ ಈ ವಿಚಾರ ಹೊಸದಲ್ಲ. ಆರಂಭದಿಂದಲೂ ನಾನು ಇದನ್ನು ಎದುರಿಸುತ್ತಲೇ ಬಂದಿದ್ದೇನೆ. ಆದರೆ, ಈ ರೀತಿಯ ವಿಚಾರಗಳನ್ನು ಎದುರಿಸಿಯೂ ನಾನು ಇಲ್ಲಿಯವರೆಗೆ ಬಂದಿರುವುದಕ್ಕೆ ಖುಷಿ ಇದೆ ಎಂದು ಅವರು ತಿಳಿಸಿದ್ದಾರೆ.