ಒಂದು ಹೆಣ್ಣು ಪರಿಪೂರ್ಣಳು ಎನಿಸಿಕೊಳ್ಳಬೇಕಾದರೆ ತಾಯಿಯಾಗಬೇಕು ಎಂಬ ಮಾತು ಇಂದಿಗೂ ಚಾಲ್ತಿಯಲ್ಲಿದೆ. ಅದರಂತೆಯೇ ಎಲ್ಲಾ ಹೆಣ್ಣು ಮಕ್ಕಳು ಕೂಡ ಬಯಸುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಆ ತಾಯ್ತನವನ್ನ ಪಡೆಯುವುದೇ ಒಂದು ಕಷ್ಟ ಎಂಬಂತಾಗಿದೆ. ಕೆಲಸದ ಒತ್ತಡ, ಆಹಾರ ಶೈಲಿ, ಜೀವನ ಶೈಲಿ, ಲೇಟ್ ಮ್ಯಾರೇಜ್ ಹೀಗೆ ನಾನಾ ಕಾರಣಗಳಿಂದ ತಾಯ್ತನ ಕಷ್ಟವಾಗಿದೆ.
ಆದ್ರೆ ತಾಯಿಯಾಗಬೇಕು ಎಂಬ ಕನಸು ಎಲ್ಲರಿಗೂ ಇರುತ್ತೆ ಅಲ್ವಾ. ಹಾಗಾದ್ರೆ ಕೆಲವೊಂದು ಸಣ್ಣ ಟಿಪ್ಸ್ ಗಳನ್ನ ನಾವಿಲ್ಲಿ ಹೇಳ್ತೇವೆ. ಅದನ್ನ ಒಮ್ಮೆ ಫಾಲೋಮಾಡಿ ನೋಡಿ ರಿಸಲ್ಟ್ ಸಿಗಬಹುದು. ಶೀಘ್ರ ತಾಯಿಯಾಗಬೇಕೆನ್ನುವವರು ಆಹಾರ ಕ್ರಮದಲ್ಲಿ ಇದನ್ನ ಅನುಸರಿಸಿ.
ಆದಷ್ಟು ಗಾಢ ಹಸಿರು ತರಕಾರಿಗಳನ್ನೇ ತಿನ್ನಿ. ವೈದ್ಯರು ಹೇಳುವ ಪ್ರಕಾರ ಹಸಿರು ತರಕಾರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಲಿಕ್ ಆಮ್ಲ ಹಾಗೂ ಕಬ್ಬಿಣಾಂಶ ಇರುತ್ತದೆ. ಇದು ಗರ್ಭ ಧರಿಸಲು ಬಯಸುವ ಮಹಿಳೆಯರಿಗೆ ಅತ್ಯುತ್ತಮವಂತೆ.
ಬ್ರೋಕಲಿ ಕೇಳೆ ಇರ್ತೀರಾ. ಇದು ಶ್ರೀಮಂತರು ತಿನ್ನುವ ಆಹಾರ ಅಂತ ಕೂಡ ಹೇಳ್ತಾರೆ. ಅದರಲ್ಲಿ ಪೋಷ್ಟಿಕಾಂಶ ಕೂಡ ಅಷ್ಟೇ ಶ್ರೀಮಂತವಾಗಿರುತ್ತದೆ. ಗರ್ಭಿಣಿಯಾಗಲು ಬಯಸುವವರು ಇದನ್ನು ಹೆಚ್ಚು ತಿನ್ನಿ. ಇದರಲ್ಲೂ ಹೆಚ್ಚು ಆಮ್ಲ, ಕಬ್ಬಿಣ, ವಿಟಮಿನ್ ಸಿ ಅಡಗಿದೆ.
ಗರ್ಭೀಣಿಯಾಗ ಬಯಸುವವರು ಇದನ್ನ ಹೆಚ್ಚು ಗಮನದಲ್ಲಿಟ್ಟುಕೊಳ್ಳಿ. ವಿಟಮಿನ್ ಸಿ ಇರುವಂತ ಮೂಸಂಬಿ, ನಿಂಬೆ, ಕಿತ್ತಳೆ, ಕಿವಿ ಹಣ್ಣುಗಳನ್ನು ಹೆಚ್ಚು ಸೇವಿಸಿ.
ಒಮ್ಮೆ ಇದನ್ನ ಟ್ರೈ ಮಾಡಿ. ಜೊತೆಗೆ ತುಂಬಾ ದಿನ ಗರ್ಭ ಧರಿಸಿಲ್ಲ ಎಂದಾದರೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.