ಹೀರೋಯಿನ್ ಗಳು ಮದುವೆ ವಿಚಾರದಲ್ಲಿ ತುಂಬಾ ನಿಧಾನವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬೇಗ ಮದುವೆಯಾದ್ರೆ ಕೆರಿಯರ್ ಗೆ ಸಂಕಷ್ಟ ಅನ್ನೋದು ಅವರ ಅಭಿಪ್ರಾಯ. ಆದ್ರೆ ನಟಿ ಪೂಜಾ ಹೆಗ್ಡೆ ಬಾಯ್ ಫ್ರೆಂಡ್ ಆಗೋನು ಹೇಗಿರಬೇಕು ಅನ್ನೋದನ್ನ ಹೇಳಿದ್ದಾರೆ.
ನಾನು ಮದುವೆಯಾಗುವ ಹುಡುಗ ಕೂಡು ಕುಟುಂಬದವನಾಗಿರಬಾರದು, ನನ್ನನ್ನ ತುಂಬಾ ಕೇರ್ ಮಾಡಬೇಕು ಎಂಬುದನ್ನ ಹೇಳಿಕೊಂಡಿದ್ದಾರೆ.
ಆದ್ರೆ ಇದು ನಿಜಜೀವನದಲ್ಲಿ ಅಲ್ಲ. ಬದಲಿಗೆ ಈ ಎಲ್ಲಾ ಆಸೆಗಳಿರೋದು ಅವರ ಸಿನಿಮಾದಲ್ಲಿ. ಮೋಸ್ಟ್ ಬ್ಯಾಚುಲರ್ಸ್ ಸಿನಿಮಾದಲ್ಲಿ ಅಕಿಲ್ ಅಕ್ಕಿನೇನಿ ಹೀರೋ ಆಗಿ ನಟಿಸಿದ್ದಾರೆ. ಆ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಇದರ ಟೀಸರ್ ರಿಲೀಸ್ ಆಗಿದ್ದು, ಇದರಲ್ಲಿ ಸಿನಿಮಾದಲ್ಲಿ ಹುಡುಗ ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ.
ಪೂಜಾ ಹೆಗ್ಡೆ ಒಕ ಲೈಲಾ ಕೋಸಂ ಸಿನಿಮಾ ಮೂಲಕ ಟಾಲಿವುಡ್ ಗೆ ಕಾಲಿಟ್ಟರು. ಅಲ್ಲು ಅರ್ಜುನ್ ನಟನೆಯ ಡಿಜೆ ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ರು. ಅದಾದ ನಂತರ ಸಾಕಷ್ಟು ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.