ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿರುವ ನಟಿ ರಾಗಿಣಿ ಹಾಗೂ ನಟಿ ಸಂಜನಾರನ್ನು ಬಿಡುಗಡೆ ಮಾಡದಿದ್ದರೆ ಬಾಂಬ್ ಹಾಕ್ತೀವಿ ಎಂದು ಎನ್ ಡಿ ಪಿ ಎಸ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಇಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ತುಮಕೂರಿನ ತಿಪಟೂರು ಮೂಲದ ರಾಜಶೇಖರ್ ಮತ್ತು ಗುಬ್ಬಿ ಮೂಲದ ವೇದಾಂತ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಬಳಿಕ ಕೆಲವು ವಿಚಾರಗಳು ಬೆಳಕಿಗೆ ಬಂದಿದೆ.
ತಿಪಟೂರಿನ ರಾಜಶೇಖರ್ ತನ್ನ ಸ್ವಾರ್ಥಕ್ಕಾಗಿ ಈ ಬಾಂಬ್ ಬೆದರಿಕೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ. ರಾಜಶೇಖರ್ ಹಾಗಲವಾಡಿಯ ಕುರಿಹಳ್ಳಿಯಲ್ಲಿ ಮದುವೆಯಾಗಿದ್ದನು. ಆದರೆ ಆಕೆಯ ತಂಗಿಯನ್ನು ಮದುವೆಯಾಗುವ ಆಸೆ ಈತನಲ್ಲಿತ್ತಂತೆ. ಆದ್ರೆ ಈ ನಡುವೆ ಆಕೆಯನ್ನ ರಮೇಶ್ ಎಂಬಾತ ಮದುವೆಯಾಗಿದ್ದಾನೆ. ಮಾವನ ಮನೆಯ ಆಸ್ತಿಗಾಗಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಯಾಗುವ ಆಸೆ ಹೊಂದಿದ್ದ ರಾಜಶೇಖರ್. ಆದ್ರೆ ಆ ಅದೃಷ್ಟ ಕಯ ತಪ್ಪಿ ಹೋಯ್ತಲ್ಲ ಅಂತ ರಮೇಶ್ ವಿರುದ್ಧ ಕಿಡಿಕಾರಿ ಪತ್ರ ಬರೆದಿದ್ದ.
ಹಾಗಲವಾಡಿಯ ವೇದಾಂತನ ಸಹಾಯ ಪಡೆದು, ಆತನಿಂದ ಎಡಗೈನಲ್ಲಿ ಪತ್ರ ಬರೆಸಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ.