ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ನಲ್ಲಿ ಟ್ವೀಟ್ ಒಂದನ್ನು ಮಾಡಿದ್ದು ಇಂದು ಸಾಯಂಕಾಲ 6 ಘಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ಭಾರೀ ಕುತೂಹಲ ಕೆರಳಿಸಿರುವ ಪ್ರಧಾನಿಯವರ ಈ ಟ್ವೀಟ್, ಮೋದಿಯವರು ಈ ಬಾರಿಯ ಭಾಷಣದಲ್ಲಿ ಯಾವ ಟ್ವಿಸ್ಟ್ ನೀಡಲಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಈ ಹಿಂದೆ ರಾತ್ರಿ 8 ಘಂಟೆಯ ಸಮಯದಲ್ಲಿ ಭಾಷಣ ಮಾಡಿ ದೇಶದಲ್ಲಿ ನೋಟ್ ಬ್ಯಾನ್ ನಂತಹ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಆದ್ದರಿಂದ ಈ ಸಲದ ಭಾಷಣದಲ್ಲಿ ಅದೇ ತರಹದ ಯಾವುದಾದರೂ ಶಾಕಿಂಗ್ ನ್ಯೂಸ್ ಇರಬಹುದೇ ಎಂದು ಕಾಯುವಂತಾಗಿದೆ.
ಅಥವಾ ಕೋವಿಡ್ ಮಹಾಮಾರಿ ದೇಶದಲ್ಲಿ ತನ್ನ ಮಾರಕತೆ ತೋರಿಸುತ್ತಿದ್ದು ಈ ವಿಚಾರವಾಗಿ ಪ್ರಧಾನಿ ಯವರು ಏನಾದರೂ ಸಂದೇಶ ನಿಡಬಹುದೇ ಎಂದು ಕೆಲವು ಊಹಾಪೋಹಗಳು ಹರಿದಾಡುತ್ತಿವೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಖಾತೆಯಿಂದ ಹೊರಬಿದ್ದಿರುವ ಇವತ್ತಿನ ಸಾಯಂಕಾಲದ ಭಾಷಣದ ವಿಷಯ ದೇಶದಲ್ಲೆಡೆ ಬಿರುಗಾಳಿಯಂತೆ ಹಬ್ಬುತ್ತಿದೆ.