Monday, December 6, 2021
No menu items!
Home Latest ಅಲ್ಲಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಬಟ್ಟೆ ಧರಿಸುವಂತಿಲ್ಲ!

ಅಲ್ಲಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಬಟ್ಟೆ ಧರಿಸುವಂತಿಲ್ಲ!

ಭಾರತದಲ್ಲಿನ ನಾನಾ ಪ್ರದೇಶಗಳಲ್ಲಿ ಹಾಸು ಹೊಕ್ಕಾಗಿರೋ ನಂಬಿಕೆಗಳೇ ಚಿತ್ರ ವಿಚಿತ್ರ. ಕೆಲವೊಂದನ್ನು ಕೇಳಿದರೆ ಯಾವ ಪ್ರತಿಕ್ರಿಯೆಯನ್ನೂ ಕೊಡದೇ ಅವಾಕ್ಕಾಗುವಂತಿರುತ್ತವೆ. ಇನ್ನೂ ಕೆಲ ಆಚರಣೆಗಳಂತೂ ಇಂಥಾದ್ದು ಈ ಕಾಲದಲ್ಲಿ ಮಾತ್ರವಲ್ಲ, ಯಾವ ಕಾಲದಲ್ಲಿಯೂ ಇರಲು ಸಾಧ್ಯವೇ ಇಲ್ಲ ಅನ್ನಿಸುವಂತಿರುತ್ತವೆ. ಈಗ ಹೇಳ ಹೊರಟಿರೋ ವಿಚಾರ ಕೇಳಿದರಂತೂ ನಿಮಗೂ ಕೂಡಾ ಅಂಥಾದ್ದೊಂದು ದಿಗ್ಭ್ರಮೆ ಆಗದಿರಲು ಸಾಧ್ಯವೇ ಇಲ್ಲ!

ಅಂಥಾದ್ದೊಂದು ವಿಚಿತ್ರದಲ್ಲಿಯೇ ವಿಚಿತ್ರವಾದ ಆಚರಣೆ ರೂಢಿಯಲ್ಲಿರೋದು ಪ್ರಸಿದ್ಧ ಪ್ರವಾಸಿ ಸ್ಥಳಗಾಳಾದ ಕುಲು ಮತ್ತು ಮನಾಲಿ ಪ್ರದೇಶದಲ್ಲಿ. ಇವೆರಡೂ ಕೂಡಾ ಅವಳಿ ಪ್ರದೇಶಗಳು. ಇಲ್ಲಿಗೆ ಜೀವಿತದಲ್ಲಿ ಒಮ್ಮೆಯಾದರೂ ಭೇಟಿ ಕೊಡಬೇಕೆಂಬುದು ಅದೆಷ್ಟೋ ಪ್ರವಾಸಪ್ರಿಯರ ಮಹಾ ಕನಸು. ಇಂಥಾ ಪ್ರವಾಸಿಗರ ಚಿತ್ರವೆಲ್ಲ ಆ ಪ್ರದೇಶಗಳ ವಾತಾವರಣ, ಪರಿಸರದ ಸುತ್ತಲೇ ಕೇಂದ್ರೀಕರಿಸಿರುತ್ತೆ. ಆದ್ರೆ ಕೊಂಚ ಕ್ಯೂರಿಯಾಸಿಟಿ ಇದ್ದರೂ ಕೂಡಾ ಆ ವಾತಾವರಣದಲ್ಲಿ ಹಾಸುಹೊಕ್ಕಾಗಿರೋ ಅದೆಷ್ಟೋ ಅಚ್ಚರಿದಾಯಕ ಆಚರಣೆಗಳು ಕಣ್ಣಿಗೆ ಬೀಳುತ್ತವೆ.

ಹಿಮಾಚಲಪ್ರದೇಶದ ಭಾಗವಾಗಿರೋ ಕುಲು ಮನಾಲಿಯ ಭಾಗದಲ್ಲಿಯೇ ಪಿನಿ ಅನ್ನೋ ಗ್ರಾಮವಿದೆ. ಅಲ್ಲಿ ದಸರಾ ಬಂತೆಂದರೆ ವಿಶೇಷವಾದ ಹಬ್ಬವೊಂದು ನಡೆಯುತ್ತೆ. ಆ ಸಂದರ್ಭದಲ್ಲಿ ಕುಲು ಮನಾಲಿ ಕಣಿವೆಯ ಪ್ರದೇಶಗಳೆಲ್ಲವೂ ವೈವಿಧ್ಯಮಯವಾದ ಚಿತ್ತಾರಗಳಿಂದ ಕಂಗೊಳಿಸುತ್ತಿರುತ್ತವೆ. ಹೀಗೆ ದಸರಾ ಮುಕ್ತಾಯದ ದಿನಗಳಲ್ಲಿ ಐದು ದಿನಗಳ ಕಾಲ ಪಿನಿ ಎಂಬ ಹಳ್ಳಿಯಲ್ಲಿ ಹಬ್ಬ ನಡೆಯುತ್ತೆ. ಆ ಅಷ್ಟೂ ದಿನಗಳ ಕಾಲ ಈ ಹಳ್ಳಿಯ ಹೆಂಗಸರು ಬಟ್ಟೆ ಧರಿಸುವಂತಿಲ್ಲ. ಈ ಕಾಲದಲ್ಲಿ ಗಂಡನೂ ಕೂಡಾ ತನ್ನ ಹೆಂಡತಿಯತ್ತ ಕಿರುನಗೆ ಬೀರುವಂತೆಯೂ ಇಲ್ಲವಂತೆ!

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments