ಬೆಂಗಳೂರು : ಇಂದು ನಾಡಿನೆಲ್ಲೆಡೆ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ಪೂಜೆಗೆ ಬೇಕಾದ ಸಾಮಾಗ್ರಿಗಳನ್ನ ತರುವಾಗ ಜನ ಕೊರೊನಾ ಇರುವುದನ್ನೇ ಮರೆತಂತೆ ಕಾಣುತ್ತಿದೆ. ಗುಂಪು ಸೇರುವ ಜಾಗದಲ್ಲಿ ಸಾಮಾಜಿಕ ಅಂತರ ಮುಖ್ಯ ಅಂತ ಎಷ್ಟೇ ಹೇಳಿದ್ರು ಜನ ಅದನ್ನ ನೆನಪಿನಲ್ಲೆ ಇಟ್ಟುಕೊಳ್ಳುತ್ತಿಲ್ಲ. ಇಂದು ಕೆ ಆರ್ ಮಾರ್ಕೇಟ್ ನಲ್ಲೂ ಇಂತದ್ದೇ ದೃಶ್ಯ ಕಣ್ಣಿಗೆ ಬಿದ್ದಿದೆ.
ಹೌದು ಹಬ್ಬದ ಭರಾಟೆಯಲ್ಲಿ ಕೆ ಆರ್ ಮಾರ್ಕೆಟ್ ನಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ. ಸಾಮಾಜಿಕ ಅಂತರವಿಲ್ಲ, ಎಷ್ಟೋ ಮಂದಿ ಮಾಸ್ಕ್ ಕೂಡ ಧರಿಸಿರಲಿಲ್ಲ. ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ, ಮುನ್ನೆಚ್ಚರಿಕೆ ಇಲ್ಲದೆ ವ್ಯಾಪಾರ ಮಾಡಿದ್ದಾರೆ.
ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಂತೂ ಸರ್ಕಾರ ಕೂಡ ವೈರಸ್ ಸಂಪರ್ಕ ಪತ್ತೆ ಹಚ್ಚುವುದನ್ನೇ ಬಿಟ್ಟು ಬಿಟ್ಟಿದೆ. ವೈರಸ್ ಸರ್ವನಾಶಕ್ಕೆ ಇನ್ನು ಔಷಧ ಕೂಡ ಸಿದ್ದವಾಗಿಲ್ಲ. ಹೀಗಿರುವಾಗ ಜವಬ್ದಾರಿ ನಮ್ಮ ಮೇಲೂ ಇರುತ್ತೆ ಅಲ್ಲವಾ..? ಹಬ್ಬದ ಸಂಭ್ರಮಕ್ಕಾಗಿ ವೈರಸ್ ಬಗ್ಗೆ ಭಯವೇ ಇಲ್ಲದಂತೆ ಮುನ್ನುಗ್ಗಿದ್ದರೇ ಹೇಗೆ..? ಜನಸಾಮಾನ್ಯರು ಕೂಡ ಸ್ವಲ್ಪ ಕಾಳಜಿ ವಹಿಸುವುದು ಉತ್ತಮ.