Tuesday, July 27, 2021
No menu items!
Home Karnataka ನಂದಿ ಬೆಟ್ಟದಲ್ಲಿ ಇನ್ಮುಂದೆ ಪ್ಯಾರಾ ಗ್ಲೈಂಡಿಂಗ್ ಆರಂಭ

ನಂದಿ ಬೆಟ್ಟದಲ್ಲಿ ಇನ್ಮುಂದೆ ಪ್ಯಾರಾ ಗ್ಲೈಂಡಿಂಗ್ ಆರಂಭ

ಬೆಂಗಳೂರು: ನಂದಿ ಬೆಟ್ಟ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ವೀಕೆಂಡ್ ಬಂತು ಅಂದ್ರೆ ಹೆಚ್ಚಿನ ಜನ ಆಯ್ಕೆ ಮಾಡಿಕೊಳ್ಳುವುದೇ ನಂದಿಬೆಟ್ಟವನ್ನು. ಹೀಗಾಗಿ ವೀಕೆಂಡ್ ನಲ್ಲಿ ನಂದಿ ಬೆಟ್ಟ ಫುಲ್ ರಶ್ ಇರುತ್ತೆ.

ವೀಕೆಂಡ್ ನಲ್ಲಿರುವ ಜನಸಂದಣಿಯನ್ನು ಕಡಿಮೆ ಮಾಡಬೇಕೆಂದು ನಿರ್ಧರಿಸಿದ ಇಲಾಖೆ, ಪ್ಯಾರಾ ಗ್ಲೈಂಡಿಂಗ್ ತರಲು ತೀರ್ಮಾನಿಸಿದೆ. ಹಲವಾರು ದೇವಾಲಯಗಳು, ಸ್ಮಾರಕಗಳ ನೆಲೆಯಾಗಿರುವ ಪ್ರಸಿದ್ಧ ನಂದಿ ಬೆಟ್ಟ ಶೀಘ್ರವೇ ಪ್ಯಾರಾ ಗ್ಲೈಡಿಂಗ್ ಕೇಂದ್ರವಾಗುತ್ತಿದೆ.

ಪ್ರವಾಸೋದ್ಯಮ ಮತ್ತು ತೋಟಗಾರಿಕೆ ವಿಭಾಗ ಜಂಟಿಯಾಗಿ ನಂದಿ ಗಿರಿಧಾಮದಲ್ಲಿ ಪ್ಯಾರಾ-ಗ್ಲೈಡಿಂಗ್ ಸೇರಿದಂತೆ ಮನರಂಜನಾ ಚಟುವಟಿಕೆಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಅಲ್ಲದೆ ಅನೇಕ ಸ್ಥಳೀಯ ಪಕ್ಷಿ ಪ್ರಭೇದಗಳಿಗೆ ನೆಲೆ, ವಲಸೆ ಪಕ್ಷಿಗಳಿಗೆ ಸಹ ಸೂಕ್ತ ಸ್ಥಳವಾಗಿರುವ ನಂದಿ ಬೆಟ್ಟದ ಗಮ್ಯ ಸ್ಥಾನದಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸಿ ಕೊಡುವ ಯೋಜನೆ ಇದಾಗಿದೆ. ಡಿಸೆಂಬರ್ 24 ರಿಂದ ನಂದಿ ಬೆಟ್ಟಕ್ಕೆ ಮೂರು ತಿಂಗಳ ಕಾಲ ಪ್ಯಾರಾ-ಗ್ಲೈಡಿಂಗ್ ನಡೆಸಲು ಖಾಸಗಿ ಕಂಪನಿಗೆ ಅನುಮತಿ ನೀಡಿವೆ.

ಬಹಳ ಸಮಯದ ನಂತರ, ನಂದಿ ಬೆಟ್ಟದಲ್ಲಿ ಪ್ಯಾರಾ-ಗ್ಲೈಡಿಂಗ್ ಆಯೋಜಿಸಲಾಗುತ್ತಿದೆ. ಈ ವರ್ಷ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮೂರು ಕಂಪನಿಗಳಿಗೆ ಅನುಮತಿ ನೀಡಲಾಯಿತು, ಆದರೆ ಇತರ ಏಜೆನ್ಸಿಗಳಿಂದ ಕ್ಲಿಯರೆನ್ಸ್ ಪಡೆಯಲು ವಿಳಂಬವಾದ ಕಾರಣ ಅವುಗಳಲ್ಲಿ ಯಾವುದನ್ನೂ ಅಂತಿಮಗೊಳಿಸಲು ಸಾಧ್ಯವಾಗಿಲ್ಲಈ ಬಾರಿ ಮತ್ತೆ, ಅನುಮತಿ ನೀಡಲಾಗಿದೆ ಮತ್ತು ಅದು ಅಂತಿಮವಾಗಿ ಪ್ರಾರಂಬವಾಗುತ್ತದೆ ಎಂದು ಆಶಿಸುತ್ತೇವೆ ತೋಟಗಾರಿಕೆ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದರು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments