Saturday, December 4, 2021
No menu items!
Home Bharata ನುಸ್ರತ್ ದುರ್ಗಾವತಾರಕ್ಕೆ ಮುಸ್ಲಿಮರಿಂದ ಬೆದರಿಕೆ: ಭದ್ರತೆ ಕೇಳಿದ ಸಂಸದೆ 

ನುಸ್ರತ್ ದುರ್ಗಾವತಾರಕ್ಕೆ ಮುಸ್ಲಿಮರಿಂದ ಬೆದರಿಕೆ: ಭದ್ರತೆ ಕೇಳಿದ ಸಂಸದೆ 

ಕೋಲ್ಕತ್ತಾ: ಮುಸ್ಲಿಂ ಧರ್ಮದ ಪರಿವಾರದಲ್ಲಿ ಹುಟ್ಟಿ ಹಿಂದುವನ್ನು ಮದುವೆಯಾಗಿರುವ ನುಸ್ರತ್ ತಮಗೆ ರಕ್ಷಣೆ ನೀಡುವಂತೆ ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಕೋರಿದ್ದಾರೆ. ಸದ್ಯ ಲಂಡನ್ನಲ್ಲಿ ಬಂಗಾಳಿ ಚಲನಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿರುವ ನಟಿ, ಅಲ್ಲಿಯ ಭಾರತೀಯ ರಾಯಭಾರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ಬಂಗಾಳ ಸರ್ಕಾರವನ್ನೂ ಕೋರಿದ್ದಾರೆ.
ಇವರು ಈ ಹಿಂದೆ ಕುಂಕುಮ, ಮಂಗಳಸೂತ್ರ ಧರಿಸಿ ಪತಿ ನಿಖಿಲ್ ಜೈನ್ ಜತೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಕಂಡ ಮುಸ್ಲಿಂ ಸಂಪ್ರದಾಯವಾದಿಗಳು ನುಸ್ರತ್ ಮೇಲೆ ಹರಿಹಾಯ್ದಿದ್ದರು. ‘ಪಶ್ಚಿಮ ಬಂಗಾಳದಲ್ಲಿ ನಾವೆಲ್ಲರೂ ಒಟ್ಟಾಗಿ ದುರ್ಗಾಪೂಜೆ ಕೈಗೊಳ್ಳುತ್ತೇವೆ. ಇದು ಒಗ್ಗಟ್ಟಿನ ಭಾರತದ ಸೂಚಕವಾಗಿದೆ’ ಎಂದು ನುಸ್ರತ್ ವಿರೋಧಿಸಿದ್ದವರಿಗೆ ತಿರುಗೇಟು ನೀಡಿದ್ದರು. ಆದರೆ ಇದೀಗ ಮತ್ತೆ ಇಂಥವರಿಂದ ತಮಗೆ ಜೀವಬೆದರಿಕೆ ಬರುತ್ತಿದೆ. ನನಗೆ ರಕ್ಷಣೆ ನೀಡಿ ಎಂದು ಕೋರಿದ್ದಾರೆ.
ಮಹಾಲಯ ನಿಮಿತ್ತ ದುರ್ಗಾ ಅವತಾರವಿರುವ ಫೋಟೋಶೂಟ್ ಮಾಡಿಸಿಕೊಂಡು ಅದರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಹಲವಾರು ಮಂದಿ ಕಿಡಿಕಾರಿ ಕಮೆಂಟ್ ಹಾಕಿದ್ದಾರೆ.

ನಿನಗೆ ಅಲ್ಹಾ ಅಂದರೆ ಭಯವಿಲ್ಲವೆ. ನಿಮ್ಮ ಸಾವಿನ ಸಮಯ ಹತ್ತಿರ ಬಂದಿದೆ. ನಿಮ್ಮ ದೇಹವನ್ನು ಮುಚ್ಚಿಡಲು ಆಗುವುದಿಲ್ಲವೇ ಎಂದು ಕಮೆಂಟ್ ಮಾಡಿದ್ದಾರೆ.
News In Brief: Trinamool MP Nusrat Jahan Threatened For Social Media Photos Dressed As Goddess Durga
Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments