ಬೆಂಗಳೂರು : ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೊಗಿದ್ದ ನಟಿ ಮಣಿಯರಿಗೆ ಇಂದು ಕೂಡ ಬೇಸರವಾಗಿದೆ. ಅಕ್ಬೋಬರ್ 24 ರಂದು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಇಂದು ಜಾಮೀನು ಅರ್ಜಿ ತಿರಸ್ಕರಿಸಿದೆ. ಇಂದು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ತೀರ್ಪು ಪ್ರಕಟಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ಪರ ವಕೀಲರು ನ್ಯಾಯಾಧೀಶರ ಎದರು ಹಾಜರಾಗಿದ್ದರು. ತೀರ್ಪು ನೀಡಿರುವ ನ್ಯಾಯಾಲಯ ಇನ್ನು 15 ದಿನಗಳ ಕಾಲ ನಟಿಯರಿಗೆ ನ್ಯಾಯಾಂಗ ಬಂಧನ ಮುಂದುವರೆಸಿದೆ.
ಬೆಳಗ್ಗೆಯಿಂದ ಜಾಮೀನು ಸಿಗುತ್ತೆ ಅನ್ನೋ ಆಸೆಯಿಂದ ಮಧ್ಯಾಹ್ನದ ಊಟವನ್ನು ಮಾಡದೆ ನಟಿ ಮಣಿಯರು ತೀರ್ಪಿಗಾಗಿ ಕಾಯುತ್ತಿದ್ದರಂತೆ. ಆದ್ರೆ ತೀರ್ಪು ಉಲ್ಟಾ ಬಂದಿದ್ದು, ನಟಿಮಣಿಯರಿಗೆ ಶಾಕ್ ಆಗಿದೆ. ಬೇಲ್ ಸಿಗದ ಕಾರಣ ಜೈಲಿನಲ್ಲೇ ಇಬ್ಬರು ನಟಿಯರು ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ ಎನ್ನಲಾಗಿದೆ.
ಸೆಪ್ಟಂಬರ್ 4 ರಂದು ಸಿಸಿಬಿ ಪೊಲೀಸರು ನಟಿ ರಾಗಿಣಿಯನ್ನು ಡ್ರಗ್ ಕೇಸ್ ವಿಚಾರದಲ್ಲಿ ಅರೆಸ್ಟ್ ಮಾಡಲಾಗಿತ್ತು. ಆನಂತರ ಸ್ವಲ್ಪ ದಿನಗಳ ಬಳಿಕ ನಟಿ ಸಂಜನಾ ಅವರನ್ನು ಬಂಧಿಸಿದ್ದರು. ಕಳೆದ ಎರಡು ತಿಂಗಳಿನಿಂದ ನಟಿಮಣಿಯರು ಜೈಲಿನಲ್ಲೇ ಇದ್ದಾರೆ.