ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಧಿಸಲಾಗಿದ್ದು ರಾತ್ರಿ ಕರ್ಫ್ಯೂ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಗೈಡ್ಲೈನ್ಸ್ ಬಿಡುಗಡೆ ಮಾಡಿದ್ದು, ಮೇಲ್ನೋಟಕ್ಕೆ ಹೆಸರಿಗಷ್ಟೇ ಕರ್ಫ್ಯೂ ಎಂಬಂತಿದೆ.
ಇಂದು ರಾತ್ರಿಯಿಂದಲೇ ಏಕಾಏಕಿ ನೈಟ್ ಕರ್ಫ್ಯೂ ಜಾರಿಯಾದರೆ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದು ರಾತ್ರಿ ಬದಲಾಗಿ ನಾಳೆ ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ಅಲ್ಲದೇ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆ ಬದಲಾಗಿ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಜನವರಿ 2 ರವರೆಗೆ 9 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೆ ಬರಲಿದ್ದು ಕೆಳಕಂಡ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಿದೆ.
1) ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆ ವ್ಯಕ್ತಿಗಳ ಚಲನವಲನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
2) ಎಲ್ಲಾ ಮಾದರಿಯ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಅನುಮತಿ. ಖಾಲಿ ಸರಕು ಸಾಗಣೆ ವಾಹನ ಓಡಾಟಕ್ಕೂ ಅನುಮತಿ.
3) ರಾತ್ರಿ ಕರ್ಪ್ಯೂ ಸಂದರ್ಭದಲ್ಲಿ ಶೇ.50ರಷ್ಟು ನೌಕರರೊಂದಿಗೆ ಕೆಲಸ ಮಾಡಲು ಕಾರ್ಖಾನೆಗಳಿಗೆ ಅನುಮತಿ.
4) ನೌಕರರು ಐಟಿ ಕಾರ್ಡ್ ತೋರಿಸಿ, ಓಡಾಡಲು ಅವಕಾಶ
5) 24×7 ಕಾರ್ಖಾನೆಗಳ ಕೆಲಸಕ್ಕೆ ಯಾವುದೇ ನಿರ್ಬಂಧವಿಲ್ಲ
6) ರಾತ್ರಿ ಬಸ್, ರೈಲು, ವಿಮಾನ ಟ್ಯಾಕ್ಸಿ, ಆಟೋ ಸಂಚಾರಕ್ಕೂ ಕರ್ಪ್ಯೂ ವೇಳೆ ಅನುಮತಿ
7) ಕ್ರಿಸ್ ಮಸ್ ಹಾಗೂ ಹೊಸ ವರ್ಷವನ್ನು ಮಧ್ಯರಾತ್ರಿಯೂ ಕೊರೋನಾ ಮಾರ್ಗಸೂಚಿ ಕ್ರಮಗಳೊಂದಿಗೆ ಆಚರಿಸಲು ಅವಕಾಶ ಮಾಡಿಕೊಡಲಾಗಿದೆ.