Thursday, May 13, 2021
No menu items!
Home Karnataka ಮಿನಿಮಮ್ ನಾಲೆಡ್ಜ್ ಇರಬೇಕಲ್ವಾ, ನೀವೂ ಐಎಎಸ್ ಪಾಸ್ ಮಾಡಿದ್ದೀರಾ ಅನ್ನೋದೆ ಡೌಟು..? ಡಿಸಿ ರೋಹಿಣಿ ಸಿಂಧೂರಿ...

ಮಿನಿಮಮ್ ನಾಲೆಡ್ಜ್ ಇರಬೇಕಲ್ವಾ, ನೀವೂ ಐಎಎಸ್ ಪಾಸ್ ಮಾಡಿದ್ದೀರಾ ಅನ್ನೋದೆ ಡೌಟು..? ಡಿಸಿ ರೋಹಿಣಿ ಸಿಂಧೂರಿ ಬಗ್ಗೆ ಎಂಎಲ್ಸಿ ವಾಗ್ದಾಳಿ

ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರ ಐಎಎಸ್ ಬಗ್ಗೆ ಎಂಎಲ್ ಸಿ ರಘು ಆಚಾರ್ ಅನುಮಾನ ವ್ಯಕ್ತಪಡಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ಐಎಎಸ್ ಪಾಸ್ ಮಾಡಿದ್ದಾರಾ..? ಅನ್ನೋದೆ ನಂಗೆ ಡೌಟು ಎಂದು ಎಂಎಲ್ಸಿ ರಘು ವಾಗ್ದಾಳಿ ನಡೆಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಂಎಲ್ ಸಿ ರಘು ಆಚಾರ್ ಅವರು, ರೋಹಿಣಿ ಐಎಎಸ್ ಪಾಸ್ ಆಗೀದ್ದಾರಾ ಅನ್ನೋದೆ ಡೌಟು. ನೀವು 100% ಐ ಎಎಸ್ ಪಾಸ್ ಆಗಿದ್ರೆ ಮಿನಿಮಮ್ ನಾಲೆಡ್ಜ್ ಇರಬೇಕಲ್ವಾ. ನೀವು ಆಡಳಿತ ನಡೆಸಿವುದು ನಿಮ್ಮ ಜವಾಬ್ದಾರಿ. ನಿಮಗೆ ಕಾನೂನು ಗೊತ್ತಿರಬೇಕಲ್ವೆ.? ಶಾಸಕರನ್ನು ಬಿಟ್ಟು ಸರ್ಕಾರಿ ಕೆಲಸ ಮಾಡೋದು ಕಾನೂನಿನಲ್ಲಿ ಇದೆಯಾ ಗೊತ್ತಿಲ್ಲ. ಶಾಸಕಾಂಗಕ್ಕಿಂತ ದೊಡ್ಡವರ ಇವರು ಎಂದು ಕಿಡಿಕಾರಿದರು.

ಮೈಸೂರಿಗೆ 3ನೇ ಮಹಾರಾಣಿ ಬೇಡ ಎಂದಿದ್ದ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ ಅಂದಿದ್ರು. ಇದಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪತ್ರ ಬರೆದು ತಿರುಗೇಟು ನೀಡಿದ್ದರು. ಈ ಬಗ್ಗೆ ಮಾತನಾಡಿದ ರಘು ಆಚಾರ್, ನಿಮ್ಮ ಆಫೀಸ್ ನಿಂದ ನಿಮ್ಮ ಪತ್ರ ಹೇಗೆ ಲೀಕ್ ಆಯ್ತು. ನಿಮ್ಮ ಆಫೀಸರ್ ಲೀಕ್ ಮಾಡಿದ್ರಾ? ಅಥವಾ ನೀವು ಮಾಡಿದ್ರಾ ? ಇದು ಗೊತ್ತಾಗಬೇಕು. ಇದು ಅಸೆಂಬ್ಲಿಯಲ್ಲಿ ಚರ್ಚೆ ಆಗಬೇಕು. ನಿಮ್ ಕೆಲಸ ನೀವ್ ಮಾಡಿ. ನಮ್ಮ ಕೆಲಸ ನಾವ್ ಮಾಡ್ತೇವೆ ಎಂದು ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಗುಡುಗಿದರು.

ಶೋ ಮಾಡಿಕೊಂಡು ರಥ ಎಳೆದುಕೊಂಡು ಇದ್ದೀರಾ ? ಎಂದು ಟೀಕಿಸಿದ ರಘು ಆಚಾರ್, ಕೋವಿಡ್ ನೀವು ಒಬ್ಬರೆ ನಿರ್ವಹಣೆ ಮಾಡುತ್ತಿಲ್ಲ. ನೀವು ಅದರ ಒಂದು ಭಾಗ ಅಷ್ಟೇ. ಈ ತರದವರು ಡಿಸಿ ಆದರೆ ದೇವರೆ ಕಾಪಾಡಬೇಕು. ರಾಜ್ಯಾಂಗ ಕಾರ್ಯಾಂಗ ನ್ಯಾಯಾಂಗದ ಬಗ್ಗೆ ಓದಿ, ಈಗ ಓದಿರುವುದೆಲ್ಲವನ್ನು ಮರೆತುಬಿಟ್ಟಿದ್ದಾರೆ. ಅದನ್ನು ಮತ್ತೆ ಓದಿ ತಿಳಿದುಕೊಳ್ಳಿ ಎಂದಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments