ಮುಂಬೈ: ದಕ್ಷಿಣ ಮುಂಬೈನಲ್ಲಿರುವ ಸಿಟಿ ಸೆಂಟರ್ ಮಾಲ್ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸ್ಥಳಕ್ಕೆ 24 ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿದ್ದು, 250 ಅಗ್ನಿ ಶಾಮಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ನಿನ್ನೆ ರಾತ್ರಿ 8.53 ಗಂಟೆಗೆ ಮಾಲ್ನಲ್ಲಿ ಅಗ್ನಿ ಕಾಣಿಸಿಕೊಂಡಿದ್ದು, 4 ಮಹಡಿಯ ಈ ಮಾಲ್ನಲ್ಲಿ ಹಲವು ಕಡೆ ಬೆಂಕಿಯ ಕೆನ್ನಾಲಿಗೆ ಹರಡಿದೆ. 10.45ರ ಹೊತ್ತಿಗೆ ಬೆಂಕಿ 3ನೇ ಮಹಡಿಗೂ ಹರಡಿದೆ. ಬೆಂಕಿ ನಂದಿಸಲು ಅಗ್ನಿಶಾಮಕರು ಹರಸಾಹಸ ಪಡುತ್ತಿದ್ದು, ಕಟ್ಟಡದಿಂದಲ್ಲಿದ್ದ 200-300 ಮಂದಿಯನ್ನು ರಕ್ಷಿಸಿದ್ದಾರೆ.
ಇನ್ನು ಅಕ್ಕಪಕ್ಕದ ಕಟ್ಟಡಗಲಲ್ಲಿದ್ದ ಸುಮಾರು 3,500 ಜನರನ್ನು ರಕ್ಷಿಸಲಾಗಿದೆ. ಮಾಲ್ ಗೆ ಬೆಂಕಿ ಹತ್ತಿಕೊಂಡು ೧೪ ಗಂಟೆಗಳು ಕಳೆದರೂ ಇನ್ನೂ ಕಾರ್ಯಾಚರಣೆ ಮುಂದುವರಿದಿದೆ. ಅದೃಷ್ಟವಶಾತ್ ಹೆಚ್ಚು ಸಾವು-ನೋವು ಸಂಭವಿಸಿಲ್ಲ.
ಏತನ್ಮಧ್ಯೆ, ಕಾರ್ಯಾಚರಣೆ ವೇಳೆ ಓರ್ವ ಸಿಬ್ಬಂದಿ ಗಾಯಗೊಂಡಿದ್ದು, ಗಾಯಗೊಂಡ ಸಿಬ್ಬಂದಿಯನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಗ್ನಿ ರೌದ್ರ ನರ್ತನಕ್ಕೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಘಟನೆಗೆ ಪ್ರಮುಖ ಕಾರಣಗಳು ತಿಳಿದು ಬಂದಿಲ್ಲ. ಈ ಮಾಲ್ನಲ್ಲಿ ಮೊಬೈಲ್ ಬಿಡಿ ಭಾಗಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.