ಇಸ್ಲಮಾಬಾದ್: ಕೊನೆಗೂ ಪಾಕಿಸ್ತಾನ ಪ್ರಪಂಚದ ಮುಂದೆ ಬೆತ್ತಲಾಗಿ ಮಂಡಿಯೂರಿ ತಾನು ಉಗ್ರರ ತವರೂರು ಎಂದು ಒಪ್ಪಿಕೊಂಡಿದೆ. 26/11 ರಂದು ನಡೆದ ಮುಂಬೈ ಟೆರರ್ ಅಟ್ಯಾಕ್ ಪ್ರಕರಣದಲ್ಲಿ ಭಾಗಿಯಾದ 11 ಉಗ್ರರು ಪಾಕಿಸ್ತಾನದವರೆಂದು ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆಯಾದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
2008ರಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತ ಸುಮಾರು 880 ಪುಟಗಳ ಪಟ್ಟಿಯಲ್ಲಿ, ಮುಹಮ್ಮದ್ ಅಮ್ಜದ್ ಖಾನ್ ಹೆಸರು ಉಲ್ಲೇಖವಾಗಿದ್ದು, ಈತ 2008ರ ಭಯೋತ್ಪಾದಕ ದಾಳಿ ನಡೆಸಲು ನಿಟ್ಟಿನಲ್ಲಿ ಅಲ್ ಫೌಜ್ ಎಂಬ ಬೋಟ್ ಅನ್ನು ಖರೀದಿಸಿದ್ದ. ಅಷ್ಟೇ ಅಲ್ಲ ಅಮ್ಜದ್ ಯಮಹಾ ಮೋಟಾರ್ ಬೋಟ್ ಎಂಜಿನ್, ಲೈಫ್ ಜಾಕೆಟ್ಸ್ ಅನ್ನು ಕರಾಚಿಯಲ್ಲಿ ಖರೀದಿಸಿದ್ದು, ನಂತರ ಮುಂಬೈನಲ್ಲಿ ದಾಳಿ ನಡೆಸಲು ಬಳಸಿಕೊಂಡಿದ್ದರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.
ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆಯಾದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ವರದಿ ಮಾಡಿರುವ ಪಟ್ಟಿಯಲ್ಲಿ ದೇಶದ 1210 ಕುಖ್ಯಾತ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಉಲ್ಲೇಖಿಸಲಾಗಿದೆ ಆದರೆ ಹಫೀಜ್ ಸಯೀದ್, ಮಸೂದ್ ಅಜರ್, ಅಥವಾ ದಾವೂದ್ ಇಬ್ರಾಹಿಂ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಇತ್ತೀಚೆಗೆ ಭಾರತ ತಾಯಿಯ ನಲವತ್ತು ಯೋಧರು ಹುತಾತ್ಮರಾಗಲು ಕಾರಣವಾಗಿದ್ದ ಪುಲ್ವಾಮಾ ದಾಳಿಯ ರೂವಾರಿ ತಾನೆಂದು ಪಾಕಿಸ್ತಾನ ಬಹಿರಂಗವಾಗಿ ಒಪ್ಪಿಕೊಂಡಿತ್ತು. ಪಾಕ್ ಸಚಿವರು ಸಂಸತ್ತಿನಲ್ಲೇ ಪುಲ್ವಾಮಾ ದಾಳಿಯನ್ನು ಇಮ್ರಾನ್ ಕಾನ್ ಸರ್ಕಾರದ ಮಹತ್ವದ ಸಾಧನೆ ಎಂದು ಹೇಳಿ ಹೊಗಳಿದ್ದರು.ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗ ತಂದಿತ್ತು. ಇದೀಗ ಮುಂಬೈ ದಾಳಿಯ ರೂವಾರಿಗಳು ಕೂಡಾ ಪಾಕಿಸ್ತಾನವೇ ಎಂದು ಜಗಜ್ಜಾಹೀರಾಗಿರುವುದು ಪ್ರಪಂಚದ ಮುಂದೆ ಪಾಕಿಸ್ತಾನದ ನಿಜಬಣ್ಣ ಮತ್ತೊಮ್ಮೆ ಸಾಬೀತಾಗಿದೆ