Saturday, December 4, 2021
No menu items!
Home Karnataka ಮೈಸೂರಿಗೆ ರಾಣಿಯರಿದ್ದಾರೆ, ಮೂರನೇ ಮಹಾರಾಣಿ ಅವಶ್ಯಕತೆ ಇಲ್ಲ: ರೋಹಿಣಿ ಸಿಂಧೂರಿ ಬಗ್ಗೆ ಆಕ್ರೋಶ

ಮೈಸೂರಿಗೆ ರಾಣಿಯರಿದ್ದಾರೆ, ಮೂರನೇ ಮಹಾರಾಣಿ ಅವಶ್ಯಕತೆ ಇಲ್ಲ: ರೋಹಿಣಿ ಸಿಂಧೂರಿ ಬಗ್ಗೆ ಆಕ್ರೋಶ

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಪಿ ಮಂಜುನಾಥ್ ಅವರು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಮೈಸೂರು ಅರಮನೆಗೆ ಈಗಾಗಲೇ ರಾಣಿಯರಾಗಿ ಪ್ರಮೋದಾದೇವಿ, ತ್ರಿಶಿಖಾ ಇದ್ದಾರೆ.ನೀವು ಮಹಾರಾಣಿಯಾಗಿ ಮೆರೆಯಬೇಡಿ.ಅಧಿಕಾರಿಯಾಗಿ ಜನರ ಸಮಸ್ಯೆಗೆ ಸ್ಪಂದನೆ ಮಾಡಿ ಎಂದು ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಶಾಸಕ್ ಹೆಚ್ಪಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಣಸೂರು ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇದೆ. ಆದರೆ ಯಾವುದಕ್ಕೂ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ. ಅವರು ಅವರದ್ದೇ ಆದ ಭ್ರಮಾ ಲೋಕದಲ್ಲಿದ್ದಾರೆ. ತ್ರೈಮಾಸಿಕ ಸಭೆ ಇರುವುದು ನಾವು ಕ್ಷೇತ್ರದ ಸಮಸ್ಯೆ ಬಗೆಹರಿಸಿಕೊಳ್ಳಲು.ಇಲ್ಲಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಆದರೆ, ಈ ಬಾರಿ ಹಾಗೆ ಆಗಲಿಲ್ಲ. ರೋಹಿಣಿ ಸಿಂಧೂರಿ ಅವರು ತಮ್ಮನ್ನು ಏನು ಅಂತ ತಿಳಿದುಕೊಂಡಿದ್ದಾರೋ ಗೊತ್ತಿಲ್ಲ.ಸಭೆಯಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲೇ ಪ್ರೋಟೋಕಾಲ್ ಮಿಸ್ ಆಗಿದೆ ಎಂದು ಕೆಡಿಪಿ ಸಭೆ ಬಳಿಕ ಹೆಚ್ಪಿ.ಮಂಜುನಾಥ್ ಕಿಡಿಕಾರಿದ್ದಾರೆ.

ನೀವು ನಿಮ್ಮದೇ ಧಾಟಿಯಲ್ಲಿ ಅಧಿಕಾರ ನಡೆಸುತ್ತೀದ್ದೀರ. ಜನಪ್ರತಿನಿಧಿಗಳ ಅವಶ್ಯಕತೆ ಇಲ್ಲ, ಎಲ್ಲವನ್ನೂ ನಾನೇ ಮಾಡುತ್ತೇನೆ ಎಂಬ ನಿಲುವು ಸರಿಯಲ್ಲ. ಈ ಬಾರಿಯ ಗಜಪಯಣಕ್ಕೆ ಕೋವಿಡ್ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಆಹ್ವಾನಿಸಲಿಲ್ಲ. ಆದರೆ, ನೀವು ಹೋಗಿ ಅಲ್ಲಿ ಮಾಡಿದ್ದೇನು? ನಾಲ್ಕು ಗಂಧಕಡ್ಡಿ ಹಚ್ಚಿ ಆನೆಗಳಿಗೆ ಪೂಜೆ ಮಾಡಿದ್ದೀರಿ. ಆ ಕೆಲಸವನ್ನು ನಾವು ಮಾಡಿದರೆ ಆಗುತ್ತಿರಲಿಲ್ಲವೇ? ಕರೆದರೆ ನಾವು ಬಂದು ಗಂಧದ ಕಡ್ಡಿ ಹಚ್ಚುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು. ನಿಮಗೆ ಇಷ್ಟೊಂದು ಮೆರೆಯುವ ಆಸೆ ಇದ್ದರೆ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಯನ್ನು ಎದುರಿಸಿ ಎಂದು ಶಾಸಕ ಸವಾಲು ಹಾಕಿದರು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments