Thursday, August 5, 2021
No menu items!
Home Latest ಎಲ್ಲರೂ ಗಂಡು ಮಗು ಬೇಕು ಅಂದ್ರೆ ಈ ದಂಪತಿ ಹೇಣ್ಣು ಮಗುವಿಗಾಗಿ 14 ಗಂಡು ಮಕ್ಕಳನ್ನು...

ಎಲ್ಲರೂ ಗಂಡು ಮಗು ಬೇಕು ಅಂದ್ರೆ ಈ ದಂಪತಿ ಹೇಣ್ಣು ಮಗುವಿಗಾಗಿ 14 ಗಂಡು ಮಕ್ಕಳನ್ನು ಹೆತ್ತರು..

ಮಿಚಿಗಾನ್: ಎಲ್ಲರೂ ಗಂಡು ಮಗು ಬೇಕು ಅಂತ ಹೆಣ್ಣು ಭ್ರೂಣ ಹತ್ಯೆ ಮಾಡ್ತಾರೆ. ಎಷ್ಟೇ ಕಾನೂನು ಜಾರಿಗೆ ತಂದ್ರೂ ಹೆಣ್ಣು ಮಗು ಅಂದ್ರೆ ಒಂಥರಾ ತಾತ್ಸಾರ.. ಆದರೆ ಇಲ್ಲೊಂದು ದಂಪತಿ ಹೆಣ್ಣು ಮಗುವಿಗಾಗಿ 14 ಮಂದಿ ಗಂಡು ಮಕ್ಕಳಿ ಜನ್ಮ ನೀಡಿದ್ದಾರೆ. ಆಶ್ಚರ್ಯ ಆಗ್ತಿದ್ಯಾ..? ಈ ಸುದ್ದಿ ಓದಿ..

ಅಮೆರಿಕದ ಮಿಚಿಗಾನ್ ರಾಜ್ಯದಲ್ಲಿ ಕಟೇರಿ ಶ್ವಾಂಡ್ಟ್ ಎಂಬುವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕಟೇರಿ ಶ್ವಾಂಡ್ಟ್ ಹಾಗೂ ಜೇ ಗೇಲಾರ್ಡ್ ಎಂಬ ದಂಪತಿ ಈ ಮಗುವಿನ ತಾಯಿ-ತಂದೆಯಾಗಿದ್ದು, ಮಗುವಿಗೆ ಮ್ಯಾಗಿ ಜಯ್ನೆ ಎಂದು ಹೆಸರಿಟ್ಟಿದ್ದಾರೆ. ಗ್ರ್ಯಾಂಡ್ ರಾಪಿಡ್ಸ್ ನ ಮರ್ಸಿ ಹೆಲ್ತ್ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಮ್ಯಾಗಿ ಜನಿಸಿದ್ದಾಳೆ.

ಮೂರು ದಶಕಗಳ ಬಳಿಕ ಜನಿಸಿದ ಮ್ಯಾಗಿಯನ್ನು 14 ಸಹೋದರರೂ ಖುಷಿಯಿಂದ ಸ್ವಾಗತಿಸಿದ್ದಾರೆ. ಮನೆಯವರೆಲ್ಲಾ ಮ್ಯಾಗಿ ಜನಿಸಿದ್ದಕ್ಕೆ ಸಂತಸದಲ್ಲಿ ತೇಲಾಡುತ್ತಿದ್ದಾರೆ. 14 ಮಕ್ಕಳು ಜನಿಸಿದ ಮೇಲೆ ಹೆಣ್ಣು ಮಗು ಜನಿಸುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ನಮ್ಮ ತಾಯಿ ಮತ್ತೆ ಪಿಂಕ್ ಉಡುಗೆ ತೊಡುತ್ತಾರೆ ಎಂದುಕೊಂಡಿರಲಿಲ್ಲ ಎಂದು ಮ್ಯಾಗಿಯ 28 ವರ್ಷದ ಅಣ್ಣ ಟೈಲರ್ ಸಂತಸ ವ್ಯಕ್ತಪಡಿಸಿದ್ದಾರೆ. ಟೈಲರ್ ಸಹ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಮ್ಮ ಕುಟುಂಬಕ್ಕೆ ಮ್ಯಾಗಿಯನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೆವು. ಈ ವರ್ಷ ನಮಗೆ ಹಲವು ಕಾರಣಗಳಿಂದಾಗಿ ತುಂಬಾ ನೆನಪಿನಲ್ಲಿ ಇರುತ್ತದೆ. ಮ್ಯಾಗಿ ನಮಗೆ ಬಹುದೊಡ್ಡ ಉಡುಗೊರೆ. ನಾವು ಇದನ್ನು ಊಹಿಸಿರಲಿಲ್ಲ ಎಂದು ಜೇ ಸಂತಸ ವ್ಯಕ್ತಪಡಿಸಿದ್ದಾರೆ.

ಸೇಂಟ್ ಮೇರಿಸ್ ಹೈ ಸ್ಕೂಲ್ ನಿಂದ ಕಟೇರಿ ಹಾಗೂ ಜೇ ಗೇಲಾರ್ಡ್ ಹೈ ಸ್ಕೂಲ್ ಹಾಗೂ ಗೇಲಾರ್ಡ್ ಡೇಟಿಂಗ್ ಮಾಡುತ್ತಿದ್ದರು. 1993ರಲ್ಲಿ ಇಬ್ಬರೂ ಫೇರಸ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಸೇರಿದ್ದಾರೆ. ಪದವೀಧರರಾಗುವ ಮೊದಲೇ ಅವರಿಗೆ ಮೂವರು ಗಂಡು ಮಕ್ಕಳು ಜನಿಸಿದ್ದರು. ಕುಟುಂಬ ಬೆಳೆಯುತ್ತಿದ್ದರೂ ದಂಪತಿ ಮಾತ್ರ ಓದನ್ನು ಮುಂದುವರಿಸಿದ್ದರು. ಜೇ ವೃತ್ತಿಯಲ್ಲಿ ವಕೀಲರಾಗಿ ದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments