ಚಿರಂಜೀವಿ ಸರ್ಜಾ ಅಗಲಿ ನಾಲ್ಕು ತಿಂಗಳುಗಳೇ ಕಳೆದಿವೆ. ಆದ್ರೆ ಅಭಿಮಾನಿಗಳ ಮನಸ್ಸಲ್ಲಿ ಮತ್ತು ಕುಟುಂಬಸ್ಥರ ನಡುವೆ ಅವರಿನ್ನೂ ಜೀವಂತವಾಗಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯನ್ನು ಬಿಟ್ಟು ಹೊರಟು ಹೋದ ಚಿರು ನೆನಪಲ್ಲೇ ಮೇಘನಾ ಜೀವನ ಸಾಗಿಸುತ್ತಿದ್ದಾರೆ. ಇಂದಿಗೂ ಅವರ ಆಸೆಗಳನ್ನ ಮೇಘನಾ ಜೀವಂತವಾಗಿರಿಸಿದ್ದಾರೆ. ಅದರಂತೆ ನಿನ್ನೆ ಅವರ ಸೀಮಂತ ಕಾರ್ಯ ನಡೆದಿದ್ದು, ಚಿರು ಪಕ್ಕದಲ್ಲೇ ನಿಂತು ಆಶೀರ್ವದಿಸಿದ್ದಾರೆ.
ಚಿರು ಅಗಲಿದ್ದಾಗ ಮೇಘನಾ 4 ತಿಂಗಳ ಗರ್ಭಿಣಿಯಾಗಿದ್ದರು. ಈಗ 8 ತಿಂಗಳು ತುಂಬಿದ್ದು, ಮೇಘನಾ ಪೋಷಕರು ಸೀಮಂತ ಶಾಸ್ತ್ರ ಮುಗಿಸಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅತ್ತಿಗೆ ಹಾಗೂ ಮಗುವಿಗೆ ಒಳ್ಳೆಯದಾಗಲಿ ಎಂದು ಧ್ರುವ ಹಾರೈಸಿದರು.
ಸೀಮಂತ ಕಾರ್ಯಕ್ರಮದಲ್ಲಿ ಮೇಘನಾ ಪಕ್ಕವೇ ಚಿರು ನಿಂತಿದ್ರು. ಹಾಗಂತ ಭ್ರಮೆ ಅಲ್ಲ ವಾಸ್ತವವಾಗಿಯೇ ಚಿರು ಸೀಮಂತದಲ್ಲಿದ್ರು. ಅಂದ್ರೆ ಅವರ ಕಟೌಟ್ ಅನ್ನು ಮೇಘನಾ ಪಕ್ಕವೇ ನಿಲ್ಲಿಸಲಾಗಿತ್ತು. ಆ ಚಿತ್ರ ನೋಡಿದವರಿಗೆ ಚಿರುನೇ ಬಂದಿದ್ದಾರೇನೋ ಎಂಬಂತೆ ಭಾಸವಾಗುತ್ತಿತ್ತು.
ಚಿರು ಆಸೆಯಂತೆಯೇ ಸೀಮಂತ ಕಾರ್ಯ ನಡೆದಿದೆ. ಮುಂದೆಯೂ ಕೂಡ ಅವರ ಆಸೆಯಂತೆಯೇ ಎಲ್ಲವೂ ನಡೆಯುತ್ತದೆ ಎಂದು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.