ಬೆಂಗಳೂರು: ಚಿರು ಮಗ ಹುಟ್ಟಿದಾಗಿನಿಂದ ಮಗುವಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದೀಗ ಯಾವುದೋ ಪುಟ್ಟ ಮಗುವಿನ ಫೋಟೋ ಬಳಸಿ ಇದು ಮೇಘನಾ ಮಗುವಿನ ಹೊಸ ವಿಡಿಯೋ ಎಂದು ಹಾಕಿದ್ದಾರೆ. ಇದು ಮೇಘನಾ ರಾಜ್ ಗಮನಕ್ಕೆ ಬಂದಿದ್ದು, ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲೇ ಮೇಘನಾ ರಾಜ್ ಉತ್ತರಿಸಿದ್ದಾರೆ.
ತುಂಬಾ ತಾಳ್ಮೆಯಿಂದಲೇ ಉತ್ತರಿಸಿರುವ ಮೇಘನಾ ರಾಜ್. ಇನ್ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿ ಆ ಲಿಂಕ್ ನ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಇರುವ ಮಗು ನಿಜವಾಗಲೂ ತುಂಬಾ ಮುದ್ದಾಗಿದೆ. ನಿಮ್ಮ ನಿರೀಕ್ಷೆ ಸುಳ್ಳಾಗಿಸಿದ್ದಕ್ಕೆ ಕ್ಷಮೆ ಇರಲಿ. ಆದ್ರೆ ಈ ಮಗು ಜೂನಿಯರ್ ಚಿರು ಅಲ್ಲ ಎಂದು ಬರೆದುಕೊಂಡಿದ್ದಾರೆ.
ಚಿರಂಜೀವಿ ನಿಧನ ಹೊಂದಿದಾಗಿನಿಂದ ಮೇಘನಾ ರಾಜ್ ಮತ್ತು ಚಿರು ಬಗ್ಗೆ ಸದ್ದಿಗಳು ಹರಿದಾಡುತ್ತಲೇ ಇವೆ. ಈ ಮುಂಚೆಯೂ ಮೇಘನಾ ರಾಜ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಅದನ್ನು ಸ್ಕ್ರೀನ್ ಶಾಟ್ ತೆಗೆದು ಈ ರೀತಿ ಮಾಡಬೇಡಿ ಎಂದೇ ಹೇಳಿದ್ದರು. ಇದೀಗ ಜೂನಿಯರ್ ಚಿರು ಸರದಿ. ಯಾವುದೋ ಮಗುವಿನ ಫೋಟೋ ಬಳಸಿ ಇದು ಜೂನಿಯರ್ ಚಿರು ಎಂದವರಿಗೆ ಸಾಮಾಜಿಕ ಜಾಲತಾಣದಲ್ಲೇ ಮೇಘನಾ ರಾಜ್ ಉತ್ತರಿಸಿದ್ದಾರೆ.
ಚಿರು ಅಕಾಲಿಕ ನಿಧನದಿಂದ ನೀವಲ್ಲಿದ್ದ ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬಕ್ಕೆ ಜೂನಿಯರ್ ಚಿರು ವರವಾಗಿದ್ದಾನೆ. ಎಲ್ಲರ ನೋವನ್ನು ಮರೆಸಿದ್ದಾನೆ. ಮೇಘನಾ ರಾಜ್ ಕೂಡ ಮಗುವೇ ನನ್ನ ಮುಂದಿನ ಬದುಕು ಎಂದಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಕೊರೊನಾ ಮಹಾಮಾರಿ ಇಡೀ ಕುಟುಂಬಕ್ಕೆ ಆವರಿಸಿಕೊಮಡಿತ್ತು. ಸದ್ಯ ಮಗು ಮತ್ತು ಮೇಘನಾ ಹೋ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.