ವಾಷಿಂಗ್ಟನ್: ಜೋ ಬೈಡೆನ್ ಅಮೆರಿಕಾದ ನೂತನ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಮೊದಲ ಭಾರತೀಯ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಈ ಬೆನ್ನಲ್ಲೇ ಮಲ್ಲಿಕಾ ಶೆರಾವತ್ ಜೊತೆಗಿನ ಫೋಟೋವೊಂದು ವೈರಲ್ ಆಗಿದೆ.
i
2009ರಲ್ಲಿ ಮಲ್ಲಿಕಾ ಶೆರಾವತ್ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದರು. ಸ್ಯಾನ್ ಪ್ರಾನ್ಸಿಸ್ಕೋದ ಅಟರ್ನಿ ಜನರಲ್ ಕಮಲ ಹ್ಯಾರಿಸ್ ನೊಂದಿಗೆ. ಪಾಲಿಟಿಕ್ಸ್ ಆಫ್ ಲವ್ ಚಿತ್ರದಲ್ಲಿ ನನ್ನ ಪಾತ್ರಕ್ಕಾಗಿ ಇವರಿಂದ ನಾನು ಪ್ರೇರೆಪಿತಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಅದೇ ವರ್ಷ ಟ್ವೀಟ್ ಮಾಡಿರುವ ಮಲ್ಲಿಕಾ ಶೆರಾವತ್, ಮುಂದೆ ಅಮೆರಿಕಾ ಅಧ್ಯಕ್ಷರಾಗಬಲ್ಲರು ಎಂದು ಕೆಲವರು ಹೇಳುತ್ತಿರುವ ಮಹಿಳೆ ಜೊತೆ ಅದ್ಭುತ ಇವೆಂಟ್ ನಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದೇನೆ. ಹೆಣ್ಣು ಮಕ್ಕಳೇ ಆಳೋದು ಅಂತ ಟ್ವೀಟ್ ಮಾಡಿದ್ದರು.
ಪಾಲಿಟಿಕ್ಸ್ ಆಫ್ ಲವ್ ಎಂಬ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್ ಕಮಲಾ ಹ್ಯಾರಿಸ್ ರನ್ನು ಆಧರಿಸಿದ ಸಿನಿಮಾವನ್ನ ಮಾಡಿದ್ದರು. ಅದರಲ್ಲಿ ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತೆ ಪಾತ್ರದಲ್ಲಿ ನಟಿಸಿದ್ದರು. 2011 ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಈ ವೇಳೆ ಸ್ಯಾನ್ ಪ್ರಾನ್ಸಿಸ್ಕೋಗೆ ಹೋಗಿದ್ದ ಮಲ್ಲಿಕಾ ಶೆರಾವತ್, ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿದ್ದರು. ಆ ಫೋಟೋವನ್ನು ಶೇರ್ ಮಾಡಿಕೊಂಡಿದ್ದ ಮಲ್ಲಿಕಾ ಅಂದು ಹೇಳಿದ್ದ ಮಾತು ಇಂದು ನಿಜವಾಗಿದೆ.