ಚಾಮರಾಜನಗರ: ದೇಶದೆಲ್ಲೆಡೆ ಕೊರೋನಾ ಮಹಾಮಾರಿ ಹಿನ್ನೆಲೆ ದೇವಸ್ಥಾನಗಳಿಗೆ ಹೋಗುವ ಭಕ್ತರಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಈ ನಡುವೆ ದೇವಸ್ಥಾನಗಳ ಹುಂಡಿಯಲ್ಲೂ ಸಂಗ್ರಹವಾಗುವ ಹಣ ಕಡಿಮೆಯಾಗಿದೆ. ಶ್ರೀಮಂತ ದೇವರುಗಳ ಹುಂಡಿಯಲ್ಲೂ ಹಣ ಸಂಗ್ರಹ ಕಡಿಮೆಯಾಗಿದೆ. ಈ ಸಂಕಷ್ಟದ ನಡುವೆಯೂ ಮಲೆ ಮಾದಪ್ಪನ ಸನ್ನಿದಿಗೆ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಹುಂಡಿಯ ಹಣವನ್ನು ಎಣಿಸಲಾಗಿದೆ.
ಕಳೆದ 6 ತಿಂಗಳ ಅವಧಿಯಲ್ಲಿ ಗಣನೀಯ ಕುಸಿತವಾಗಿತ್ತು. ಇದೀಗ ಕಳೆದ 54 ದಿನಗಳ ಅವಧಿಯಲ್ಲಿ 2.21 ಕೋಟಿ ಸಂಗ್ರಹವಾಗಿದ್ದು ಹುಂಡಿ ಆದಾಯ ಚೇತರಿಕೆಯಲ್ಲಿದೆ. ಕಳೆದ 54 ದಿನದ ಅವಧಿಯಲ್ಲಿ 2.21 ಕೋಟಿ ನಗದು, 40 ಗ್ರಾಂ ಚಿನ್ನ ಮತ್ತು 1.6 ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ.
ನಿನ್ನೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ಹುಂಡಿ ಎಣಿಕೆ ಮಧ್ಯರಾತ್ರಿ 12 ಗಂಟೆಯವರೆಗೂ ನಡೆದಿದೆ. ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹುಂಡಿ ಎಣಿಕೆ ಕಾರ್ಯ ನಡೆದಿದೆ.