ನವದೆಹಲಿ:ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ‘ಜಲ್ಲಿಕಟ್ಟು’ ಸಿನಿಮಾ, ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ನ 93ನೇ ಅಕಾಡೆಮಿ ಪ್ರಶಸ್ತಿ ವಿಭಾಗದಲ್ಲಿ ಭಾರತದಿಂದ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
2019ರ ಅಕ್ಟೋಬರ್ ನಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ 14 ಸದಸ್ಯರ ಸಮಿತಿಯು ಮಲಯಾಳಂ ಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದೆ.
ಹರೀಶ್ ಅವರ ಮಾವೋವಾದಿ ಎಂಬ ಸಣ್ಣ ಕಥೆಯನ್ನು ಆಧರಿಸಿ ಸಿನಿಮಾ ಮೂಡಿಬಂದಿದೆ. ತಪ್ಪಿಸಿಕೊಂಡ ಎಮ್ಮೆ ಮತ್ತು ಪ್ರಾಣಿಗಳ ಮಾಂಸಕ್ಕಾಗಿ ಗ್ರಾಮಸ್ಥರ ಕಠಿಣ ಹೋರಾಟದ ಸುತ್ತ ಚಿತ್ರಕಥೆ ಸುತ್ತುತ್ತದೆ.ಚಿತ್ರಕ್ಕೆ ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣವಿದ್ದು ಆಂಟನಿ ವರ್ಗೀಸ್, ಚೆಂಬನ್ ವಿನೋದ್ ಮತ್ತು ಸಂತಿ ಬಾಲಚಂದ್ರನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಹಿಂದಿ, ಒಡಿಯಾ, ಮರಾಠಿ ಮತ್ತು ಇತರ ಭಾಷೆಗಳ 27 ಚಿತ್ರಗಳ ಪೈಕಿ ಸರ್ವಾನುಮತದಿಂದ ‘ ಜಲ್ಲಿಕಟ್ಟು’ ಸಿನಿಮಾ ಆರಿಸಲ್ಪಟ್ಟಿದೆ.ಹಿಂದಿ, ಮಲಯಾಳಂ, ಒರಿಯಾ ಮತ್ತು ಮರಾಠಿಯಿಂದ ಒಟ್ಟು 27 ಚಿತ್ರಗಳು ನಾಮನಿರ್ದೇಶನದ ಪಟ್ಟಿಯಲ್ಲಿದ್ದವು. ಅದರಲ್ಲಿ ತೀರ್ಪುಗಾರರಿಂದ ನಾಮನಿರ್ದೇಶನಗೊಂಡಿರುವ ಚಿತ್ರ ಮಲಯಾಳಂನ ‘ಜಲ್ಲಿಕಟ್ಟು’.