Friday, September 24, 2021
No menu items!
Home Latest ವಿಶ್ವದ ಏಕೈಕ ತೇಲುವ ಉದ್ಯಾನವನ ಎಲ್ಲಿದೆ ಗೊತ್ತಾ?

ವಿಶ್ವದ ಏಕೈಕ ತೇಲುವ ಉದ್ಯಾನವನ ಎಲ್ಲಿದೆ ಗೊತ್ತಾ?

ಪ್ರವಾಸ ಮತ್ತು ವಿಶಿಷ್ಟವಾದ ಸ್ಥಳಗಳ ವೀಕ್ಷಣೆ ಅಂದ್ರೆ ಇಷ್ಟವಿಲ್ಲ ಅನ್ನುವವರೇ ಸಿಗಲಿಕ್ಕಿಲ್ಲ. ಜೀವನದಲ್ಲಿ ಒಮ್ಮೆಯಾದ್ರೂ ವಿಶ್ವದ ಅಷ್ಟೂ ಸುಂದರ ಪ್ರದೇಶಗಳನ್ನು, ಚಿತ್ರವಿಚಿತ್ರವಾದ ತಾಣಗಳನ್ನು ಕಣ್ತುಂಬಿಕೊಳ್ಳಬೇಕೆಂಬುದು ಬಹುತೇಕರ ಕನಸು. ಈ ಜಗತ್ತಿನಲ್ಲಿ ಅಡಕವಾಗಿರೊ ವಿಶಿಷ್ಟ ಸ್ಥಳಗಳು ಒಂದೆರಡಲ್ಲ. ಅದರ ಆಕರ್ಷಣೆಗಳಿಗಂತೂ ಕೊನೆ ಮೊದಲೆಂಬುದೇ ಇಲ್ಲ. ಅದು ವಿಶ್ವದ ಕಥೆಯಾಯ್ತು. ನಮ್ಮ ದೇಶದಲ್ಲಿಯೇ ನಮಗೆ ಗೊತ್ತಿಲ್ಲದ, ಒಮ್ಮೆಯಾದ್ರೂ ನೋಡಲೇ ಬೇಕಾದ ಅದೆಷ್ಟು ತಾಣಗಳಿದ್ದಾವೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ?

ನಮ್ಮ ದೇಶದಲ್ಲಿರೋ ಒಂದಷ್ಟು ವಿಸ್ಮಯಕಾರಿ ಪ್ರದೇಶಗಳು ನಮಗೆ ಚಿರಪರಿಚಿತ. ಅದನ್ನು ನೋಡೇ ತೀರಬೇಕೆಂಬುದು ನಮ್ಮೆಲ್ಲರ ಹಂಬಲ. ಆದ್ರೆ ನಮಗೆ ಅಷ್ಟು ಸಲೀಸಾಗಿ ಗೊತ್ತಾಗದ ಒಂದಷ್ಟು ಅದ್ಭುತಗಳು ನಮ್ಮಲ್ಲಿವೆ. ಅಂಥಾದ್ದರಲ್ಲಿ ಲೋಕ್ತಕ್ ಸರೋವರವೂ ಒಂದಾಗಿ ಸೇರಿಕೊಳ್ಳುತ್ತೆ.

ನಮಗೆಲ್ಲ ರಾಷ್ಟ್ರೀಯ ಉದ್ಯಾನವನಗಳು ಗೊತ್ತು. ಅದರೊಳಗೆ ಕೋಟಿ ಕೋಟಿ ಸಸ್ಯ ಮತ್ತು ಜೀವಸಂಕುಲಗಳಿವೆ ಅನ್ನೋದೂ ಗೊತ್ತು. ಆದರೆ, ಅಂಥಾದ್ದೇ ಒಂದು ಉದ್ಯಾನವನ ಸರೋವರವೊಂದರ ಮೇಲೆ ತೇಲುತ್ತಿದೆ ಅಂದ್ರೆ ನಂಬಲು ತುಸು ಕಷ್ಟವಾಗಬಹುದೇನೋ… ಅಂಥಾ ಅಪರೂಪದ ಬೆರಗುಗಳನ್ನ ಲೋಕ್ತಕ್ ಸರೋವರ ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ.

ಲೋಕ್ತಕ್ ಸರೋವರ ಇರೋದು ಮಣಿಪುರ ರಾಜ್ಯದಲ್ಲಿ. ಮೊಯಿರಾಂಗ್ ಬಳಿ ಇರೋ ಇದು ಅತ್ಯಂತ ಶುದ್ಧ ನೀರಿನ ಸರೋವರ. ಅದರ ಮೇಲೆಲ್ಲ ವಿಶಿಷ್ಟವಾದ ಹುಲ್ಲುಗಳಿಂದ ರಚನೆಯಾದ ಹಾಸಿಗೆಗಳಂಥವುಗಳಿವೆ. ಅಲ್ಲಲ್ಲಿ ಚದುರಿಕೊಂಡ ಅದರ ಮೇಲೆ ನೂರಾರು ಸಂಖ್ಯೆಯ ಜಲ ಸಸ್ಯಗಳು, ಹಾವು, ಕಪ್ಪೆಗಳು ಮತ್ತು ಹೆಬ್ಬಾವುಗಳೂ ಇವೆಯಂತೆ. ಇದನ್ನು ನೋಡಲು ಪ್ರತೀ ವರ್ಷ ಲಕ್ಷ ಲಕ್ಷ ಪ್ರೇಕ್ಷಕರು ಎಡತಾಕುತ್ತಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments