ಬೆಂಗಳೂರು: ಹಳ್ಳಿ ಫೈಟ್, ಗ್ರಾಮ ಪಂಚಾಯತ್ ಚುನಾವಣಾ ಅಖಾಡ ರಂಗೇರುತ್ತಿದೆ. ರಂಗೇರಿದ ಅಖಾಡದಲ್ಲಿ ಇನ್ನಷ್ಟು ರಂಗುತುಂಬಿಸಲು ರಂಗಮಂದಿರ ನಟಿಮಣಿಯರು ಕೂಡಾ ಸಜ್ಜಾಗಿದ್ದಾರೆ. ಡಿ.22 ಮತ್ತು ಡಿ.27ರಂದು ಎರಡು ಹಂತದಲ್ಲಿ ನಡೆಯಲಿರು ಲೋಕಲ್ ಪೈಟ್ ಗೆ ಇದೀಗ ಭರ್ಜರಿ ಮತಪ್ರಚಾರ ಆರಂಭವಾಗಿದೆ.
ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ, ‘ಕನ್ನಡತಿ’ ಧಾರಾವಾಹಿಯಲ್ಲೂ ನಟಿಸುತ್ತಿರುವ ರಂಜನಿ ರಾಘವನ್ ಅವರು ಪಂಚಾಯಿತಿ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಶನಿವಾರ (ಡಿಸೆಂಬರ್ 19) ರಂದು ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲ್ಲೂಕಿನ ಗಿರಿಸಾಗರ ಗ್ರಾಮದಲ್ಲಿ ರಂಜನಿ ರಾಘವನ್ ಅವರು ಮೂರು ಮಂದಿ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ಮಾಡಲಿದ್ದಾರೆ.ಈ ಮೂಲಕ ಚುನಾವಣಾ ಪ್ರಚಾರಕ್ಕೆ ಇನ್ನಷ್ಟು ರಂಗು ತರಲು ರಂಜನಿ ರಾಘವನ್ ಸಿದ್ದವಾಗಿದ್ದಾರೆ.
ಸ್ಥಳೀಯ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ವಿಜಯಲಕ್ಷ್ಮಿ ಹೂಗಾರ್, ಯೆಂಕಪ್ಪ ನುಚ್ಚಿನ, ಬಿಎನ್ ಮೇತ್ರಿ ಅವರುಗಳ ಪರವಾಗಿ ರಂಜನಿ ರಾಘವನ್ ಪ್ರಚಾರ ನಡೆಸಲಿದ್ದಾರೆ.