Tuesday, June 15, 2021
No menu items!
Home Karnataka ಡಿ ಕೆ ರವಿ ಪತ್ನಿ ಕುಸುಮಾ ಹೊಂದಿರುವ ಆಸ್ತಿ ಮೊತ್ತ ಎಷ್ಟು ಗೊತ್ತಾ..?

ಡಿ ಕೆ ರವಿ ಪತ್ನಿ ಕುಸುಮಾ ಹೊಂದಿರುವ ಆಸ್ತಿ ಮೊತ್ತ ಎಷ್ಟು ಗೊತ್ತಾ..?

ಬೆಂಗಳೂರು : ಇಂದು ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರದ ಜೊತೆಗೆ ಕುಸುಮಾ ತಮ್ಮ ಹೆಸರಿನಲ್ಲಿರುವ ಆಸ್ತಿ ವಿವರನ್ನು ಸಲ್ಲಿಸಿದ್ದಾರೆ. ಅದರಲ್ಲಿ ಕುಸುಮಾ ಕೋಟಿ ಒಡತಿ ಎಂಬ ಮಾಹಿತಿ ತಿಳಿದು ಬಂದಿದೆ.

ನಾಲ್ಕು ಬ್ಯಾಂಕ್ ಖಾತೆ ಹೊಂದಿದ್ದು, 45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕುಸುಮಾ ಅವರು ಹೊಂದಿದ್ದಾರೆ. ಇನ್ನು ಈ ಆಸ್ತಿ ವಿವರದಲ್ಲಿ ಅವರು, ಗಂಡ ಡಿಕೆ ರವಿ ಹಾಗೂ ಕುಟುಂಬಸ್ಥರ ಹೆಸರನ್ನು ತಮ್ಮ ಅಫಿಡವಿಟ್ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

ಡಿಕೆ ಶಿವಕುಮಾರ್ ಅವರ ಸಲಹೆಯಂತೆ ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದರು ಜ್ಯೋತಿಷಿಗಳ ತಿಳಿಸಿದಂತೆ 12 ಗಂಟೆಯಿಂದ 12. 15ರೊಳಗೆ ಅವರ ತಂದೆ ಹನುಮಂತರಾಯಪ್ಪ ಜೊತೆ ನಾಮಪತ್ರ ಸಲ್ಲಿಸಿದ್ದರು. ಇಂದು ಕಾಂಗ್ರೆಸ್ ನಾಯಕರೊಂದಿಗೆ ಮತ್ತೊಮ್ಮೆ ಅಧಿಕೃತವಾಗಿ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಕುಸುಮಾ ಆಸ್ತಿವಿವರ ಇಂತಿದೆ:

ಒಂದು ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಕುಸುಮಾ, ನಗದು ರೂಪದಲ್ಲಿ 1,41,050 ರೂ ಹೊಂದಿದ್ದಾರೆ. ನಾಲ್ಕು ಬ್ಯಾಂಕ್ ಅಕೌಂಟ್ ಗಳಲ್ಲಿ ಸುಮಾರು 6 ಲಕ್ಷ ಹಣ ಹೊಂದಿದ್ದಾರೆ. ವಿವಿಧ ಬಾಂಡ್, ಷೇರುಗಳಲ್ಲಿ ಸುಮಾರು 2, 45, 000 ರೂ ಹೂಡಿಕೆ ಮಾಡಿದ್ದು, ಅವರು ಯಾವುದೇ ಸ್ವಂತ ವಾಹನ ಹೊಂದಿಲ್ಲ.

ಅನಿಲ್ ಗೌಡ ಎಚ್ ಎಂಬುವವರಿಂದ ವೈಯಕ್ತಿಕ ಸಾಲ 2,05,000 ರೂ ಸಾಲ ಪಡೆದಿದ್ದು, ಎ ಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್ ನಿಂದ 56, 58, 316 ರೂ ಸಾಲ ಹೊಂದಿದ್ದಾರೆ. 1,100 ಗ್ರಾಂ ಚಿನ್ನ ಬೆಳ್ಳಿ ಹೊಂದಿದ್ದು ಇದರ ಮಾರುಕಟ್ಟೆ ಮೌಲ್ಯ 45 ಲಕ್ಷ ರೂಪಾಯಿ.

ಇವರ ಒಟ್ಟು ಚರಾಸ್ತಿ ಮೌಲ್ಯ1,13,02,197. 38 ರೂ ಆಗಿದ್ದು, ಕೃಷಿ, ವಾಣಿಜ್ಯ ಭೂಮಿ, ಸ್ಥಿರಾಸ್ತಿ ವಿವರ ವಿಭಾಗದಲ್ಲಿ ತಮ್ಮ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ. ಬಿಬಿಎಂಪಿ ವಾರ್ಡ್ 40 ರಲ್ಲಿ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನ ಇದ್ದು ಇದರ ಸದ್ಯದ ಮಾರುಕಟ್ಟೆ ಮೌಲ್ಯ ಒಟ್ಟು 1,37,10,000 ರೂಪಾಯಿ.

ಇಂದು ನಾಮಪತ್ರ ಸಲ್ಲಿಸಲು ಕುಸುಮಾ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಕೂಡ ಸಾಥ್ ನೀಡಿದ್ದಾರೆ. ನವೆಂಬರ್ 3 ರಂದು ಆರ್ ಆರ್ ನಗರ ಉಪಚುನಾವಣೆ ನಡೆಯಲಿದ್ದು, ಬಿಜೆಪಿ ಯಿಂದ ಮುನಿರತ್ನ, ಕಾಂಗ್ರೆಸ್ ನಿಮದ ಕುಸುಮಾ, ಜೆಡಿಎಸ್ ನಿಂದ ಜ್ಞಾನಭಾರತಿ ಕೃಷ್ಣಮೂರ್ತಿ ಕಣದಲ್ಲಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments