ಬೆಂಗಳೂರು : ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಪೀಣ್ಯಾ ಕೈಗಾರಿಕಾ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಆರ್ ಆರ್ ನಗರದಲ್ಲಿ ಪ್ರಾಮಾಣಿಕ ಅಭ್ಯರ್ಥಿಯನ್ನು ಹಾಕಿದ್ದೇವೆ. ಆದ್ರೆ ಅಲ್ಲಿರುವವರು ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಚುನಾವಣೆ ನಡೆಯಲಿ. ಆನಂತರ ತಿಳಿಯುತ್ತದೆ. ಜನರೇ ಆ ಪ್ರಶ್ನೆಗೆ ಉತ್ತರ ನೀಡುತ್ತಾರೆ ಎಂದು ಆರ್ ಆರ್ ನಗರದ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ವೇಳೆ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ್ದು, ನಾನು ಸಿಎಂ ಆಗಿದ್ದಾಗ ಕೈಗಾರಿಕೆಗೆ ಒತ್ತು ನೀಡಿದ್ದೆ. ಕಾಂಪೀಟ್ ವಿತ್ ಚೀನಾ ಯೋಜನೆ ಜಾರಿ ಮಾಡಿದ್ದೆ. ಇದೀಗ ಪ್ರಧಾನಿ ನನ್ನ ಪ್ರಾಜೆಕ್ಟ ನ್ನು ಹೈಜಾಕ್ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಮುಂದುವರೆದಂತೆ ರಾಜ್ಯದ ಜನ ಪ್ರಧಾನಿ ಮೋದಿ ಅವರ ಮಾತನ್ನು ಪಾಲಿಸಬೇಕು. ಲೂ ಹೊಡೆಯುವವರನ್ನು ಆಯ್ಕೆ ಮಾಡಬೇಡಿ ಎಂದು ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಅದರಂತೆ ಆರ್ ಆರ್ ನಗರದಲ್ಲಿ ಕಳಪೆ ಕಾಮಗಾರಿಯಿಂದ ಹಣ ಮಾಡಿರುವ ಅಭ್ಯರ್ಥಿಯನ್ನು ಗೆಲ್ಲಿಸಬೇಡಿ ಎಂದು ಜನರಿಗೆ ಸಲಹೆ ನೀಡಿದ್ದಾರೆ.
ನವೆಂಬರ್ 3 ರಂದು ಆರ್ ಆರ್ ನಗರದಲ್ಲಿ ಉಪಚುನಾವಣೆ ನಡೆಯಲಿದೆ. ನಾಳೆ ಬಹಿರಂಗ ಸಭೆಗೆ ತೆರೆ ಬೀಳಲಿದ್ದು, ಮೂರು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಜನರ ಮನವೊಲಿಕೆಯಲ್ಲಿ ತೊಡಗಿದ್ದಾರೆ.