ಉಡುಪಿ : ಜಿಲ್ಲೆಯ ಮೂಕಾಂಬಿಕ ದೇವಸ್ಥಾನದಲ್ಲಿ ಪ್ರತಿ ವರ್ಷ ಮಹಾನವಮಿಯಂದು ರಥೋತ್ಸವ ಕಾರ್ಯಕ್ರಮ ಜರುಗುತ್ತದೆ. ರಥೋತ್ಸವ ನೋಡಲು ಸುತ್ತ ಮುತ್ತ ಇರುವ ಜಬರೆಲ್ಲಾ ಸೇರುತ್ತಾರೆ. ಈ ಬಾರಿ ಕೊರೊನಾ ಇರುವ ಕಾರಣ ಸರಳವಾಗಿಯೇ ರಥೋತ್ಸವ ನಡೆದಿದೆ. ಆದ್ರೆ ರಥೋತ್ಸವ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಕೆಲವರ ಬೇಸರಕ್ಕೂ ಕಾರಣವಾಗಿದೆ.
ಶನಿವಾರ ರಾತ್ರಿ ಈ ರಥೋತ್ಸವ ಕಾರ್ಯಕ್ರಮ ನಡೆದಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಮಾಡುತ್ತಿದ್ದ ಆಚರಣೆ, ನೀತಿ ನಿಯಮಗಳನ್ನ ಉಲ್ಲಂಘಿಸಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ನವರಾತ್ರಿಯ ಮಹಾನವಮಿಯಂದು ಮೂಕಾಂಬಿಕ ದೇವಸ್ಥಾನದಲ್ಲಿ ಪುಷ್ಪ ರಥವನ್ನು ಎಳೆಯಲಾಗುತ್ತಿತ್ತು. ಆದ್ರೆ ಈ ಬಾರಿ ಚಿನ್ನದ ರಥೋತ್ಸವವನ್ನ ಎಳೆಯಲಾಗಿದೆ.
ಶಾಸಕ ಸುಕುಮಾರ ಶೆಟ್ಟಿ ಮೂಕಾಂಬಿಕ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದವರು. ಆಗ ದೇವಸ್ಥಾನಕ್ಕೆ ಸ್ವರ್ಣರಥವನ್ನ ಕೊಟ್ಟಿದ್ದರು. ಆನಂತರ ಚಿನ್ನದ ರಥವನ್ನೇ ಎಳೆಯಬೇಕೆಂದು ಸುಕುಮಾರ ಶೆಟ್ಟಿ ಅವರು ಹೇಳಿದ್ದರೆನ್ನಲಾಗಿದೆ. ಹೀಗಾಗಿ ರಥ ಎಳೆಯುವುದರಲ್ಲಿ ಗೊಂದಲ ಮೂಡಿದೆ. ಕೊನೆಗೂ ಪ್ರತಿ ವರ್ಷದಂತೆ ಪುಷ್ಪ ರಥ ಎಳೆಯದೇ ಚಿನ್ನದ ರಥವನ್ನೇ ಎಳೆದಿರುವುದು ವಿವಾದಕ್ಕೆ ಕಾರಣವಾಗಿದೆ.