ಅಬುಧಾಬಿ: ಸೂಪರ್ ಓವರ್ ಹಂತ ತಲುಪಿದ ರೋಚಕ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಜಯದ ನಗು ಬೀರಿದೆ.
ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 163 ರನ್ ಗಳ ಸಾಧಾರಾಣ ಮೊತ್ತವನ್ನಷ್ಟೇ ಕಲೆ ಹಾಕಿತ್ತು.ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ಕೂಡಾ 6 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲಷ್ಟೇ ಶಕ್ತವಾಗಿ ಪಂದ್ಯ ರೋಚಕ ಸೂಪರ್ ಒವರ್ ನತ್ತ ತಿರುಗಿತು.
ರೋಚಕ ಸೂಪರ್ ಓವರ್ ನಲ್ಲಿ ಜಯಗಳಿಸಿದ ಕೋಲ್ಕತಾ ನೈಟ್ ರೈಟರ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ .ಆಡಿರುವ 8 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 4 ನೇ ಸ್ಥಾನಕ್ಕೇರಿದ್ದರೆ ಇತ್ತ ಸನ್ ರೈಸರ್ಸ್ ಹೈದರಾಬಾದ್ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಷ್ಟೇ ಜಯಗಳಿಸಿ 5 ನೇ ಸ್ಥಾನಕ್ಕೆ ಕುಸಿದಿದೆ
ಇದೇ ಸಮಯದಲ್ಲಿ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ 10 ರನ್ ಕಲೆ ಹಾಕುತ್ತಿದ್ದಂತೆ 5 ಸಾವಿರ ರನ್ ಕಲೆ ಹಾಕಿರುವ ಪ್ರಥಮ ವಿದೇಶಿ ಅಟಗಾರ ಎನ್ನುವ ದಾಖಲೆ ಬರೆದಿದ್ದು ಪಂದ್ಯದ ವಿಶೇಷತೆಗಳಲ್ಲೊಂದು.