ಕ್ರಿಕೆಟಿಗ ಕೆ ಎಲ್ ರಾಹುಲ್ ಹಾಗೂ ನಟ ಸುನಿಲ್ ಶೆಟ್ಟಿ ಮಗಳು ಡೇಟಿಂಗ್ ನಲ್ಲಿದ್ದಾರೆ ಎಂಬ ವಿಚಾರ ಸಾಕಷ್ಟು ಬಾರಿ ಚರ್ಚೆಯಾಗುತ್ತಲೇ ಇದೆ. ಆದ್ರೆ ಇದೀಗ ಗೂಗಲ್ ಕೆ ಎಲ್ ರಾಹುಲ್ ಪತ್ನಿ ಆಥಿಯಾ ಶೆಟ್ಟಿ ಎಂದು ಹೇಳುತ್ತಿದೆ.
ಕೆ ಎಲ್ ರಾಹುಲ್ ಸದ್ಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ. ಬ್ಯಾಟ್ಸ್ ಮನ್ ಆಗಿ ಮಿಂಚುತ್ತಿದ್ದಾರೆ. ಈ ಮಧ್ಯೆ ಯಾರಿಗೂ ಹೇಳದಂಗೆ ಯಾವಾಗ ಮದ್ವೆ ಆದ್ರು ಅನ್ನೋ ಅನುಮಾನ ಹುಟ್ಟು ಹಾಕುವಂತೆ ಮಾಡಿದೆ ಗೂಗಲ್.
ಇದಕ್ಕೆಲ್ಲಾ ಕಾರಣ ಗೂಗಲ್ ಸರ್ಚ್ ನಲ್ಲಿ ಕೆ ಎಲ್ ರಾಹುಲ್ ಪತ್ನಿ ಯಾರು ಎಂದು ಸರ್ಚ್ ಮಾಡಿದ್ರೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಆಥಿಯಾ ಶೆಟ್ಟಿ ಅವರ ಹೆಸರನ್ನು ತೋರಿಸುತ್ತಿದೆ. ಆಥಿಯಾ ಶೆಟ್ಟಿ ಫೋಟೋಗಳೇ ಗೂಗಲ್ ನಲ್ಲಿ ಕಾಣುತ್ತಿವೆ.
ಈ ಬಾರಿ ರಾಹುಲ್ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದ ಆಥಿಯಾ, ಜನ್ಮದಿನದ ಶುಭಾಶಯಗಳು ಮೈ ಬಾಯ್ ಎಂದು ವಿಶ್ ಮಾಡಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ರಾಹುಲ್ ಕೂಡ ಆಥಿಯಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದರು.
ಹೀಗಾಗಿ ಕಳೆದ ಒಂದು ವರ್ಷದಿಂದ ಇವರಿಬ್ಬರು ಡೇಟಿಂಗ್ ನಲ್ಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದು, ಆ ಸುದ್ದಿಗಳು ಗೂಗಲ್ ನಲ್ಲಿ ಲಿಂಕ್ ಆದ ಕಾರಣ ಈ ರೀತಿ ತೋರಿಸುತ್ತಿರಬಹುದು.