ಚೆನ್ನೈ: ನಿವಾರ್, ಬುರೇವಿ ಹೀಗೆ ಒಂದಾದ ನಂತರ ಒಂದು ಚಂಡಮಾರುತ ಕೇರಳ ಮತ್ತು ತಮಿಳುನಾಡಿಗೆ ಹೊಡೆತ ನೀಡಿದ ಬೆನ್ನಲ್ಲೇ ಎರಡೂ ರಾಜ್ಯಗಳಿಗೂ ಮತ್ತೊಂದು ಶಾಕ್ ಕಾದಿದೆ. ಇದೀಗಾಗಲೇ ಚಂಡಮಾರುತದ ಹೊಡೆತದಿಂದ ತತ್ತರಿಸಿರುವ ರಾಜ್ಯಗಳಿಗೆ ಇನ್ನೊಂದು ಚಂಡಮಾರುತ ಅಪ್ಪಳಿಸಲಿದೆ.
ಹಿಂದೂಮಹಾಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಎದ್ದಿದೆ.ಇದಕ್ಕೆ ಅರ್ನಬ್ ಎಂದು ಹೆಸರಿಡಲಾಗಿದ್ದು, ಇದಾಗಲೇ ಕೇರಳ ಪ್ರವೇಶಿಸಲು ಸನ್ನದ್ಧವಾಗಿರುವ ಚಂಡಮಾರುತ. ಕೆಲವೇ ದಿನಗಳಲ್ಲಿ ತಮಿಳುನಾಡು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಚಂಡಮಾರುತ ಹಿನ್ನೆಲೆಯಲ್ಲಿ ಕೇರಳ , ತಮಿಳುನಾಡು ಸೇರಿದಂತೆ ಕರ್ನಾಟಕದಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಆರ್ನಬ್ ಚಂಡಮಾರುತ ಪ್ರಭಾವ ಬೀರಲಿದ್ದು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಡಿ.9ರವರೆಗೆ ತುಂತುರು, ಡಿ.10ಕ್ಕೆ ಸಾಧಾರಣ ಮಳೆ ಆಗಲಿದೆ. ಕರಾವಳಿ ಭಾಗದಲ್ಲಿ ಡಿ.10ರವರೆಗೆ ತುಂತುರು ಮಳೆ ಬೀಳಲಿದೆ. ಉತ್ತರ ಒಳನಾಡಿನಲ್ಲಿ ಡಿ.8ರವರೆಗೆ ಒಣಹವೆ ಮುಂದುವರಿಯಲಿದ್ದು, ಡಿ.9ಕ್ಕೆ ಅಲ್ಲಲ್ಲಿ ತುಂತುರು ಮಳೆ ಸಂಭವ ಇದೆ.