Tuesday, August 3, 2021
No menu items!
Home Entertainment ( Kan ) ಡಿ. ರೂಪಾ ಟ್ವೀಟ್ ಪಟಾಕಿಗೆ ಕಿಡಿ ಹೊತ್ತಿಸಿದ ಕಂಗನಾ...!

ಡಿ. ರೂಪಾ ಟ್ವೀಟ್ ಪಟಾಕಿಗೆ ಕಿಡಿ ಹೊತ್ತಿಸಿದ ಕಂಗನಾ…!

ಬೆಂಗಳೂರು : ಐಪಿಎಸ್ ಅಧಿಕಾರಿ ಡಿ.ರೂಪಾ ದಿವಾಕರ್ ಮೌದ್ಗಿಲ್ ಅವರು ಪಟಾಕಿ ಬ್ಯಾನ್ ಕುರಿತ ವಿಚಾರವಾಗಿ ಮಾಡಿರುವ ಟ್ವೀಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದೆ. ಇದರ ನಡುವೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ರಿ ಟ್ವೀಟ್ ಒಂದನ್ನ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಗದ್ದಲ ಎಬ್ಬಿಸಿದೆ.

ನವೆಂಬರ್‌ 14ರಂದು ಡಿ. ರೂಪಾ ಹಾಕಿದ್ದ ಈ ಪೋಸ್ಟ್​ನಲ್ಲಿ ಅವರು, ‘ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯೊಂದಿಗೆ ಮೊದಲಿನಿಂದಲೂ ಬಂದದ್ದೇನಲ್ಲ. ಮಹಾಕಾವ್ಯಗಳು, ಪುರಾಣಗಳಲ್ಲಿಯೂ ಪಟಾಕಿಯ ಕುರಿತಂತೆ ಯಾವುದೇ ಉಲ್ಲೇಖವಿಲ್ಲ. ಪಟಾಕಿ ಭಾರತಕ್ಕೆ ಕಾಲಿಟ್ಟಿದ್ದು ಯುರೋಪಿಯನ್ನರ ಜತೆ’ ಎಂದು ಬರೆದುಕೊಂಡಿದ್ದರು. ಅಲ್ಲದೇ ದೀಪಾವಳಿ ಆಚರಿಸೋಕೆ ಪಟಾಕಿ ಹೊರತುಪಡಿಸಿ ಇನ್ನೂ ಹಲವು ಮಾರ್ಗಗಳಿವೆ. ಹಣತೆ ಬೆಳಗಿ, ಪ್ರೀತಿ ಪಾತ್ರರನ್ನ ಭೇಟಿಯಾಗಿ ಸಿಹಿ ವಿನಿಮಯ ಮಾಡಿಕೊಳ್ಳಿ ಎಂದು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರು.

ಇದು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿ ಟ್ವೀಟ್ ವಾರ್ ಗೆ ವೇದಿಕೆಯಾಯಿತು.ಅಲ್ಲದೇ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ರೂಪಾ ಅವರ ಹೇಳಿಕೆಗಳನ್ನು ಟೀಕಿಸಿ ಸರಣಿ ಟ್ವೀಟ್ ಮಾಡಿ ಚರ್ಚೆಗೆ ಮತ್ತಷ್ಟು ಆಸ್ಪದ ನೀಡಿದರು.

ಇಷ್ಟಕ್ಕೆ ಸುಮ್ಮನಾಗದ ರೂಪಾ ಅವರು ತಮ್ಮ ಪೋಸ್ಟ್​ ವಿರುದ್ಧ ಕಮೆಂಟ್​ ಹಾಕಿರುವವರ ಟ್ವಿಟರ್​ ಖಾತೆಯನ್ನು ಬ್ಲಾಕ್​ ಮಾಡುವುದಾಗಿ ಹೇಳಿದ್ದರು.ಇದಕ್ಕೆ ಮತ್ತೆ ಖಾರವಾಗಿ ಪ್ರತಿಕ್ರಿಯಿಸಿದ ಬಾಲಿವುಡ್​ ನಟಿ ಕಂಗನಾ ರಣಾವತ್​ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಅಶಕ್ತರಾದಾಗ ಅವರು ನಿಮ್ಮ ಮನೆ ಮುರೀತಾರೆ, ನಿಮ್ಮನ್ನ ಜೈಲಿಗೆ ಹಾಕುತ್ತಾರೆ, ಒಬ್ಬರ ಡಿಜಿಟಲ್​ ಗುರುತನ್ನ ಕಸಿದುಕೊಳ್ಳೋದು ಕೊಲೆಗೆ ಕಡಿಮೆ ಅಪರಾಧವಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ಟ್ವಿಟ್ಟರ್ ವಾರ್ ಇನ್ನೂ ಮುಂದುವರೆದಿದ್ದು ಎಲ್ಲಿಯವರೆಗೂ ಹೋಗಿ ತಲುಪುತ್ತೋ ಕಾದು ನೋಡಬೇಕಾಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments