ಮಧ್ಯಪ್ರದೇಶ : ಚುನಾವಣಾ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದಕ್ಕಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ , ಹಿರಿಯ ಕಾಂಗ್ರೆಸ್ ನಾಯಕ ‘ಕಮಲ್ ನಾಥ್’ ಅವರನ್ನು ” ಸ್ಟಾರ್ ಪ್ರಚಾರಕ” ಸ್ಥಾನವನ್ನ ಚುನಾವಣಾ ಆಯೋಗ ರದ್ದುಪಡಿಸಿ ಆದೇಶಿಸಿದೆ.
ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರಾದ ಮಾಜಿ ಸಿಎಂ ಕಮಲ್ ನಾಥ್ ಅವರು ಹಲವು ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷಕ್ಕೂ ಮುಜುಗರ ತಂದಿದ್ದರು.
ಇದಲ್ಲದೇ ಬಿಜೆಪಿಯ ಮಹಿಳಾ ಅಭ್ಯರ್ಥಿಯ ವಿರುದ್ಧ ಕೀಳುಮಟ್ಟದ ಮಾತುಗಳಿಂದ ಜರಿದಿದ್ದರು. ಬಿಜೆಪಿಯ ಮಹಿಳಾ ಅಭ್ಯರ್ಥಿ ಇಮಾರ್ತಿ ದೇವಿ ಅವರಿಗೆ “ಐಟಂ ಗರ್ಲ್ ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಲ್ಲೆವನ್ನೂ ಪರಿಗಣಿಸಿದ ಚುನಾವಣಾ ಆಯೋಗ ಸ್ಟಾರ್ ಪ್ರಚಾರಕ ಸ್ಥಾನದಿಂದ ವಜಾಗೊಳಿಸಿದೆ.
ಸತತವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಕ್ಕಾಗಿ ಕಮಲ್ ನಾಥ್ ಅವರನ್ನ ತಾರಾ ಪ್ರಚಾರಕ ಮಾನ್ಯತೆಯನ್ನ ವಜಾಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಮಲ ನಾಥ್ ಭಾಗಿಯಾದರೆ ಅವರ ಪ್ರಯಾಣ , ವಸತಿ ವೆಚ್ಚ ಸೇರಿದಂತೆ ಎಲ್ಲಾ ವೆಚ್ಚವನ್ನ ಪಕ್ಷದ ಅಭ್ಯರ್ಥಿಯೇ ಭರಿಸಬೇಕಾಗಿದೆ.